Home ಶಿಕ್ಷಣ SSLC ವಿದ್ಯಾರ್ಥಿಗಳಿಗೆ ಶಾಸಕ ಜಾರಕಿಹೊಳಿ ‘ಪತ್ರ’ ಪ್ರೋತ್ಸಾಹ! ಏನಿದು Letter Encouragement?

SSLC ವಿದ್ಯಾರ್ಥಿಗಳಿಗೆ ಶಾಸಕ ಜಾರಕಿಹೊಳಿ ‘ಪತ್ರ’ ಪ್ರೋತ್ಸಾಹ! ಏನಿದು Letter Encouragement?

0
SSLC ವಿದ್ಯಾರ್ಥಿಗಳಿಗೆ ಶಾಸಕ ಜಾರಕಿಹೊಳಿ ‘ಪತ್ರ’ ಪ್ರೋತ್ಸಾಹ! ಏನಿದು Letter Encouragement?

ಗೋಕಾಕ, ಡಿಸೆಂಬರ್ 13: ಎಸ್.ಎಸ್.ಎಲ್ ಸಿ ಫಲಿತಾಂಶ ಹೆಚ್ಚಿಸಲು‌ ಗೋಕಾಕನ ಶಾಸಕರು ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ವಿಶೇಷ ಆಸಕ್ತಿ ವಹಿಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪತ್ರ ಬರೆಯುವ ಮೂಲಕ ಪ್ರೋತ್ಸಾಹ ನೀಡಿದ್ದಾರೆ.

ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಂದ ಶೈಕ್ಷಣಿಕ ವಲಯದಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿರುವ ವಿದ್ಯಾರ್ಥಿಗಳ ಮನೆಗೆ ಒಂದು ಪತ್ರ… ಶಾಸಕರಿಗೆ ತುಂಬು ಹೃದಯದ ಅಭಿನಂದನೆಗಳು. ಒಬ್ಬ ಜವಾಬ್ದಾರಿಯುತ ಶಾಸಕರ ಕಾರ್ಯವೈಖರಿ ಮೆಚ್ಚಲೇಬೇಕು. ನಾಲ್ಕೈದು ವರ್ಷಗಳಿಂದ ಎಸ್ ಎಲ್ ಸಿ ಫಲಿತಾಂಶ ವೃದ್ಧಿಗೆ ಮಕ್ಕಳಿಗೆ ಪತ್ರ ಬರೆಯುವ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸದಲ್ಲಿ ತೊಡಗಿದ್ದಾರೆ.

‘ಒಂದು ಪತ್ರ-ಒಂದು ಮಾತು’ ವಿಶೇಷ ಅಭಿಯಾನದಡಿ ಶಾಸಕರ ಈ ಕಾರ್ಯ ನಿಜವಾಗಿಯೂ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮತ್ತು ಪರೀಕ್ಷೆ ಎದುರಿಸುವ ದೈರ್ಯ ತುಂಬಲಿದೆ ಎಂಬ ಮಾತುಗಳು ಶಿಕ್ಷಣ ವಲಯದಲ್ಲಿ ಕೇಳಿಬರುತ್ತಿದೆ. ಗೋಕಾಕ ಶೈಕ್ಷಣಿಕ ವಲಯದ ಶಿಕ್ಷಕರು ಫಲಿತಾಂಶ ವೃದ್ಧಿಗೊಳಿಸುವಕ್ಕೆ ಅನೇಕ ವಿನೂತನ ಕಾರ್ಯಕ್ರಮ ನಡೆಯಿಸಿ ಜನಮಾನಸದಲ್ಲಿ ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾಗಿದ್ದಾರೆ.

ಇದಕ್ಕೆ ಶಾಸಕರು ವಿಶೇಷ ಕಾಳಜಿ ತೋರಿಸುವ ಪ್ರಯತ್ನ ಮಾಡಿದ್ದು ಶ್ಲಾಘನೀಯ. ಗೋಕಾವಿ ನಾಡಿನ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಸಮುದಾಯ ಗೌರವಿಸುವ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಗೋಕಾಕ ಶಿಕ್ಷಣಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಶಾಸಕರು ಹಾಗೂ ಶಿಕ್ಷಣಾಧಿಕಾರಿಗಳ ಈ ಕಾರ್ಯಕ್ಕೆ ಶಿಕ್ಷಣ ಪ್ರೇಮಿಗಳು ಶಹಬ್ಬಾಷ್ ಎಂದಿದ್ದಾರೆ.

LEAVE A REPLY

Please enter your comment!
Please enter your name here