spot_img
Monday, February 24, 2025
spot_imgspot_imgspot_imgspot_img
spot_img

Top 5 This Week

spot_img

Related Posts

Senior citizens ಗೆ ಮೋದಿ 3.0 ಸರ್ಕಾರ Big Gift! ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ; ಲಕ್ಷದ ತನಕ ಸಡಿಲಿಕೆ!

ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಹಿರಿಯ ನಾಗರಿಕರಿಗೆ ಅದ್ಭುತ ಉಡುಗೊರೆ ನೀಡಿದ್ದಾರೆ. ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ ಮಿತಿಯಲ್ಲಿ ದ್ವಿಗುಣಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ.

ತೆರಿಗೆ ವಿನಾಯಿತಿ ಮಿತಿಯನ್ನು 50,000 ರೂಪಾಯಿಂದ 1 ಲಕ್ಷವರೆಗೆ ಹೆಚ್ಚಿಸಲಾಗುತ್ತಿದೆ ಎಂದಿದ್ದಾರೆ. ಅನೇಕ ಹಿರಿಯ ನಾಗರಿಕರು ಹಳೆಯ ರಾಷ್ಟ್ರೀಯ ಉಳಿತಾಯ ಯೋಜನೆ (schemes) ಖಾತೆಗಳನ್ನು ಹೊಂದಿದ್ದಾರೆ. ಅಂತಹ ಅಕೌಂಟ್ಗಳಿಗೆ ಇನ್ಮುಂದೆ ಬಡ್ಡಿ ಪಾವತಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಸೇವಿಂಗ್ಸ್ ಪ್ಲಾನ್ಗಳಿಗೆ ಇಂಟ್ರೆಸ್ಟ್ ಇನ್ಕಮ್ ನಿಯಮಗಳ ಮೇಲೆ ಹೆಚ್ಚಿನ ತೆರಿಗೆ ನೀಡಬೇಕಾಗಿತ್ತು. ಈ ತೆರಿಗೆ ಮೇಲಿನ ವಿನಾಯಿತಿ ಮಿತಿಯನ್ನು ಸಚಿವರು ಸಡಿಲಿಸಿದ್ದಾರೆ. ಇಂಟ್ರೆಸ್ಟ್ ಪೇಮೆಂಟ್ಗಳ ಮೇಲಿನ ಟಿಡಿಎಸ್ ಮಿತಿಯನ್ನು ವಾರ್ಷಿಕವಾಗಿ 2.40 ಲಕ್ಷದಿಂದ 6 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಅನೇಕ ಹಿರಿಯ ನಾಗರಿಕರಿಗೆ ಲಾಭವಾಗಲಿದೆ.

ಇನ್ನು ನ್ಯಾಷನಲ್ ಪೆನ್ಷನ್ ಸಿಸ್ಟಮ್ (ಎನ್‌ಪಿಎಸ್) ಖಾತೆಗಳಂತೆಯೇ NPS Vatsalya ಖಾತೆಗಳಿಗೂ ತೆರಿಗೆ ವಿಧಿಸಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.FY 2024-25ಕ್ಕೆ ಹಳೆಯ ಮತ್ತು ಹೊಸ ತೆರಿಗೆ ನೀತಿಯಲ್ಲಿ ಹಿರಿಯ ನಾಗರಿಕರಿಗೆ 3 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ. ಸೂಪರ್ ಸೀನಿಯರ್ ಸಿಟಿಜನ್ಸ್ (80 ವರ್ಷ ಮತ್ತು ಮೇಲ್ಪಟ್ಟವರು) ಆರ್ಥಿಕ ವರ್ಷದಲ್ಲಿ 5 ಲಕ್ಷದವರೆಗೆ ರಿಯಾಯಿತಿ ಸಿಗಲಿದೆ.

कोई जवाब दें

कृपया अपनी टिप्पणी दर्ज करें!
कृपया अपना नाम यहाँ दर्ज करें

Popular Articles