
ಗೋಮಾ, ಅಕ್ಟೋಬರ್ 05: ಕಾಂಗೋದ ಕಿವು ಸರೋವರದಲ್ಲಿ ಗುರುವಾರ 300ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬೃಹದಾಕಾರದ ದೋಣಿ ಮುಳುಗಿ 78ಕ್ಕೂ ಹೆಚ್ಚು ಪ್ರಯಾಣಿಕರು ದಾರುಣ ಸಾವನ್ನಪ್ಪಿದ್ದಾರೆ.
ದೋಣಿ ದುರಂತದಲ್ಲಿ 40 ಮಂದಿ ರಕ್ಷಣೆ ಮಾಡಲಾಗಿದೆ. 64 ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ನಿಗದಿತ ಸಂಖ್ಯೆ ಮೀರಿ ಪ್ರಯಾಣಿಕರು ದೋಣಿ ಏರಿದ್ದು, ಚಾಲಕನ ಅತೀ ಆತ್ಮವಿಶ್ವಾಸ ಈ ದುರಂತಕ್ಕೆ ಕಾರಣ ಅಂತ ಹೇಳಲಾಗಿದೆ.
ತನಿಖೆ ಪ್ರಗತಿಯಲ್ಲಿದೆ ಕನಿಷ್ಠ 3 ದಿನಗಳ ನಂತರ ಘಟನೆಯ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ ಎಂದು ಗವರ್ನರ್ ಜೀನ್ ಜಾಕ್ವೇಸ್ ಪುರಸಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.