Home ಅಂತರರಾಷ್ಟ್ರೀಯ ಅಂತರಾಷ್ಟ್ರೀಯ ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್; ದಾಸನಿಗೆ ಬಳ್ಳಾರಿಯಲ್ಲೂ ಸುತ್ತಿದ ಇನ್ನೊಂದು ವಿವಾದ ಏನದು?

ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್; ದಾಸನಿಗೆ ಬಳ್ಳಾರಿಯಲ್ಲೂ ಸುತ್ತಿದ ಇನ್ನೊಂದು ವಿವಾದ ಏನದು?

0
ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್; ದಾಸನಿಗೆ ಬಳ್ಳಾರಿಯಲ್ಲೂ ಸುತ್ತಿದ ಇನ್ನೊಂದು ವಿವಾದ ಏನದು?

ಬೆಂಗಳೂರು,29: ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಹೆಸರಿಗೆ ಮಾತ್ರ ಜೈಲು, ಅರಮನೆಯಲ್ಲಿದ್ದಂತೆ ರಾಜಾತಿಥ್ಯ ಸಿಗುತ್ತಿದೆ ಎಂದು ಫೋಟೋ-ವಿಡಿಯೊ ವೈರಲ್ ಆಗಿ ವಿವಾದವೆದ್ದು ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆದ ನಟ ದರ್ಶನ್ ಗೆ ಅಲ್ಲಿ ಕೂಡ ವಿವಾದ ಬೆಂಬಿಡದ ಭೂತದಂತೆ ಕಾಡುತ್ತಿದೆ.ಇಂದು ಬಳ್ಳಾರಿ ಜೈಲಿಗೆ ನಟ ದರ್ಶನ್ ಎಂಟ್ರಿಯಾಗುತ್ತಿದ್ದಂತೆ ಹೊಸ ವಿವಾದವೊಂದು ಹುಟ್ಟಿಕೊಂಡಿದೆ.

ಪ್ಯೂಮಾ ಬ್ರಾಂಡೆಡ್ ಟೀ ಶರ್ಟ್, ಕಪ್ಪು ಕೂಲಿಂಗ್ ಗ್ಲಾಸನ್ನು ಟೀ ಶರ್ಟಿಗೆ ಸಿಕ್ಕಿಸಿ ಎಡಗೈಯಲ್ಲಿ ಕ್ರೇಪ್ ಬ್ಯಾಂಡ್ ಧರಿಸಿ, ಬೆಡ್ ಶೀಟ್ ಸುತ್ತಿಕೊಂಡು, ಬಲಗೈಯಲ್ಲಿ ನೀರಿನ ಬಾಟಲ್ ಹಿಡಿದು ಮುಖದಲ್ಲಿ ಸ್ವಲ್ಪ ಆತಂಕ ಮತ್ತು ನಗುವಿನೊಂದಿಗೆ ಪೊಲೀಸರಿಗೆ ಹ್ಯಾಂಡ್ ಶೇಕ್ ಕೊಟ್ಟು ಜೈಲಿನ ಬ್ಯಾರಕ್ಗೆ ಎಂಟ್ರಿ ಕೊಟ್ಟಿದ್ದಾರೆ.

ಆದರೀಗ ದರ್ಶನ್ ಅಷ್ಟು ಸ್ಟೈಲ್ ಆಗಿ ಜೈಲಿಗೆ ಎಂಟ್ರಿ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಅನೇಕರು ಕೊಲೆ ಆರೋಪಿಗೆ ಇಷ್ಟೆಲ್ಲಾ ಫೆಸಿಲಿಟಿ ಯಾರು ಕೊಟ್ಟರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here