
ಬೆಂಗಳೂರು, ಫೆಬ್ರವರಿ 27: ಬೇಸಿಗೆ ಜೊತೆಗೆ ಮಕ್ಕಳಲ್ಲಿ ನಾನಾ ಇನ್ಫೆಕ್ಷನ್ಗಳು ಶುರುವಾಗಿದೆ. ಕ್ಯಾಂಡಿಡಾ ಇನ್ಫೆಕ್ಷನ್, ಫಂಗಲ್ ಇನ್ಫೆಕ್ಷನ್, ವೈರಲ್ ಇನ್ಫೆಕ್ಷನ್, ಸ್ಕಿನ್ ಇನ್ಫೆಕ್ಷನ್, ಡೈಯೆರಿಯಾ ಸೇರಿದಂತೆ ನಾನಾ ಆರೋಗ್ಯದ ಸಮಸ್ಯೆಗಳು ಕಂಡು ಬರುತ್ತಿವೆ. ಫಂಗಲ್, ವೈರಲ್, ಸ್ಕಿನ್ ಇನ್ಫೆಕ್ಷನ್ ಜೊತೆಗೆ ಡೈಯೆರಿಯಾ ಶುರುವಾಗಿದೆ. ಹೀಗಾಗಿ ವೈದ್ಯರು ಮಕ್ಕಳ ಆರೋಗ್ಯದ ಬಗ್ಗೆ ಕೊಂಚ ಎಚ್ಚರ ವಹಿಸುವಂತೆ ಪೋಷಕರಿಗೆ ಸಲಹೆ ನೀಡುತ್ತಿದ್ದಾರೆ.
ಬೇಸಿಗೆಯಿಂದ ಮಕ್ಕಳಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿದ್ದು, ಸದ್ಯ ಈ ಖಾಯಿಲೆಗಳು ಮಕ್ಕಳಿಗೆ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತಿವೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಮನೆಯಲ್ಲಿ ಒಂದು ಮಗುವಿಗೆ ಈ ರೀತಿಯ ಖಾಯಿಲೆಗಳು ಕಂಡು ಬಂದರೆ ವೇಗವಾಗಿ ಎಲ್ಲರಿಗೂ ಹರುಡುತ್ತಿದೆ. ಹೀಗಾಗಿ ಪೋಷಕರು ಮಕ್ಕಳಿಗೆ ಬೇಸಿಗೆ ಮುಗಿಯುವರೆಗೂ ಕಾದು ಆರಿಸಿದ ಬಿಸಿ ನೀರು ಕುಡಿಯುವಂತೆ, ನೀರನ್ನು ಹೆಚ್ಚು ಸೇವನೆ ಹಾಗೂ ಹರಗಡೆಯ ಆಹಾರ ಸೇವೆನೆಗೆ ಹೆಚ್ಚು ಅವಕಾಶ ಕೊಡದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಪೋಷಕರಿಗೆ ಸಲಹೆ ನೀಡಿದ್ದಾರೆ.
ಜೊತೆಗೆ ಬೇಸಿಗೆಯಲ್ಲಿ ಮಕ್ಕಳಿಗೆ ನಿತ್ರಾಣ, ನಿರ್ಜಲೀಕರಣ, ಅಜೀರ್ಣ ಸನ್ ಸ್ಟ್ರೋಕ್‌ಗಳು, ಚರ್ಮದಲ್ಲಿ ಅಲರ್ಜಿ ಹಾಗೂ ಅಜೀರ್ಣ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಹಾಗೂ ಮಲಬದ್ಧತೆಯಂತಹ ಸಮಸ್ಯೆ ಕಾಡುತ್ತದೆ. ಹೀಗಾಗಿ ಪೋಷಕರಿಗೆ ಎಚ್ಚರಿಕೆಯಿಂದ ಇರುವಂತೆ ವೈದ್ಯರು ಸಲಹೆ ನೀಡಿದ್ದಾರೆ.