Home ಸ್ಥಳೀಯ ಮಹಾಕುಂಭ ಮೇಳಕ್ಕೆ ತೆರಳಿದ ಗೋಕಾಕ ತಾಲ್ಲೂಕಿನ 6 ಮಂದಿ ದುರ್ಮರಣ! ಭಾರೀ ಅಪಘಾತದಲ್ಲಿ ಇಬ್ಬರ ಸ್ಥಿತಿ ಗಂಭೀರ!

ಮಹಾಕುಂಭ ಮೇಳಕ್ಕೆ ತೆರಳಿದ ಗೋಕಾಕ ತಾಲ್ಲೂಕಿನ 6 ಮಂದಿ ದುರ್ಮರಣ! ಭಾರೀ ಅಪಘಾತದಲ್ಲಿ ಇಬ್ಬರ ಸ್ಥಿತಿ ಗಂಭೀರ!

0
ಮಹಾಕುಂಭ ಮೇಳಕ್ಕೆ ತೆರಳಿದ ಗೋಕಾಕ ತಾಲ್ಲೂಕಿನ 6 ಮಂದಿ ದುರ್ಮರಣ! ಭಾರೀ ಅಪಘಾತದಲ್ಲಿ ಇಬ್ಬರ ಸ್ಥಿತಿ ಗಂಭೀರ!

ಬೆಳಗಾವಿ, ಫೆಬ್ರವರಿ 25 : ಮಧ್ಯ ಪ್ರದೇಶದ ಜಬಲಪೂರ ಪೆಹರಾ‌ ಟೋಲ್ ನಾಕಾ ಬಳಿ ಸಂಭವಿಸಿದ ಅಪಘಾತದಲ್ಲಿ ಗೋಕಾಕ್ ನಗರದ ಆರು ಮಂದಿ ಮೃತಪಟ್ಟಿದ್ದಾರೆ.

ಇಬ್ಬರ ಸ್ಥಿತಿ ಗಂಭೀರವಾಗಿದೆ.ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ‌ ಗೌಡರ (50), ಸುನೀಲ್ ಶೇಡಶ್ಯಾಳೆ (45), ಬಸವರಾಜ್ ಕುರ್ತಿ (63), ಬಸವರಾಜ್ ದೊಡಮಾಳ್ (49), ಈರಣ್ಣ ಶೇಬಿನಕಟ್ಟಿ (27), ವಿರೂಪಾಕ್ಷ ಗುಮತಿ (61) ಮೃತರು ದುರ್ದೈವಿಗಳು. ಗಾಯಗೊಂಡ ಮುಸ್ತಾಕ್ ಶಿಂಧಿಕುರಬೇಟ, ಸದಾಶಿವನನ್ನು ಜಬಲ್ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ ಬೆಳಗಿನ ಜಾವ ಫೋರ್ಸ್ ತೂಫಾನ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಸ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಕುಂಭಮೇಳದಲ್ಲಿ ಪುಣ್ಯ ಸ್ನಾನ ಮುಗಿಸಿ ವಾಪಾಸಾಗುವಾಗ ಅಪಘಾತ ಸಂಭವಿಸಿದೆ.

ಅಪಘಾತವಾದ ನಂತರ ಬಸ್ ಚಾಲಕ ಸ್ವಲ್ಪ ಸಮಯ ಬಸ್ ನಿಲ್ಲಿಸಿ ನಂತರ ಅಲ್ಲಿಂದ ತೆರಳಿದ್ದಾನೆ. ಬಸ್ ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here