ಸುವರ್ಣ ಸಮಾಚಾರ
ಚನ್ನಮ್ಮನ ಕಿತ್ತೂರು: ಬಂಡಾಯ ಸಾಹಿತ್ಯ ಸಂಘಟನೆಯ ವತಿಯಿಂದ ದಾಸ್ತಿಕೊಪ್ಪ ಗ್ರಾಮದ ಯುವ ಸಾಹಿತಿ ಸಿದ್ದರಾಮ ತಳವಾರ ಅವರ ‘ಕೇರಿ ಹುಡುಗನ ಕಥೆಗಳು’ ಕಥಾ ಸಂಕಲನದ ಬಿಡುಗಡೆ ಸಮಾರಂಭ ಫೆಬ್ರವರಿ 21 ಸಂಜೆ 4:30 ಕ್ಕೆ ಬೆಳಗಾವಿ ಕೊಲ್ಲಾಪೂರ ಸರ್ಕಲ್ಲ ಹತ್ತಿರ ಇರುವ ಮಾನವ ಬಂಧುತ್ವ ವೇದಿಕೆಯ ಸಭಾ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರಾದ ಬೆಳಗಾವಿಯ ಬಂಡಾಯ ಸಾಹಿತಿ ಡಾ ವೈ. ಬಿ. ಹಿಮ್ಮಡಿ ಅವರು ವಹಿಸಲಿದ್ದಾರೆ. ಕಥಾ ಸಂಕಲನವನ್ನು ರಾಜದಾನಿ ಬೆಂಗಳೂರಿನ ಬಂಡಾಯ ಸಾಹಿತಿ ಡಾ. ಸಿದ್ದನಗೌಡ ಪಾಟೀಲ ಅವರು ಬಿಡುಗಡೆ ಮಾಡಲಿದ್ದಾರೆ. ಪುಸ್ತಕದ ಕುರಿತು ಗೋಕಾಕ ಪಟ್ಟಣದ ಯುವ ಕಥೆಗಾರ ಇಸ್ಮಾಯಿಲ್ ತಳಕಲ್ಲ ಅವರು ಮಾತನಾಡಲಿದ್ದಾರೆ. ಲೇಖಕರು ಯುವ ಸಾಹಿತಿಗಳಾದ ಸಿದ್ದರಾಮ ತಳವಾರ ಅವರು ಉಪಸ್ಥಿತ ಇರಲಿದ್ದಾರೆ.
ಕಥಾ ಸಂಕಲನ ಬಿಡುಗಡೆ ಸಮಾರಂಭಕ್ಕೆ ಸಾಹಿತಿಗಳು, ಸಾಹಿತ್ಯ ಪ್ರೇಮಿಗಳು, ಬಂಡಾಯ ಸಾಹಿತಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೆಲಗಾವಿ ಬಂಡಾಯ ಸಾಹಿತಿಗಳಾದ ನದೀಮ ಸನದಿ ಮತ್ತು ದೇಮಣ್ಣ ಸೊಗಲದ ಅವರು ಮನವಿ ಮಾಡಿದ್ದಾರೆ.