ಹಾವೇರಿ, ಫೆ.13: ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಮೈಲಾರಲಿಂಗೇಶ್ವರ್ ಜಾತ್ರೆ ಸಂಭ್ರಮದಿಂದ ನಡೆದಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಜಾತ್ರೆಯಲ್ಲಿ ಕಾರ್ಣಿಕ ( Mailar Karnik)ನುಡಿಯಲಾಗಿದ್ದು ಕರ್ನಾಟಕ ಜನತೆಗೆ ಶುಭ ಸುದ್ದಿ ಸಿಕ್ಕಿದೆ.
12 ಅಡಿ ಎತ್ತರದ ಬಿಲ್ಲೇರಿದ ಗೊರವಯ್ಯ ಹನುಮಗೌಡ ಗುರೇಗೌಡರು ದೈವವಾಣಿ ನುಡಿದಿದ್ದು, ‘ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್’ ಎಂದು ನುಡಿದಿದ್ದಾರೆ.
ಮೈಲಾರ ಕಾರ್ಣಿಕದ ಅರ್ಥವನ್ನು ಗ್ರಾಮಸ್ಥರು ತಿಳಿಸಿದ್ದು ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಕಾರ್ಣಿಕಗಳನ್ನು ರಾಜ್ಯದ ಜನ ನಂಬುತ್ತಾರೆ ಅನೇಕ ಬಾರಿ ಕಾರ್ಣಿಕಗಳು ನಿಜವಾದದ್ದೂ ಇದೆ. ಕಳೆದ ವರ್ಷ ಹೂವಿನಹಡಗಲಿ ತಾಲೂಕಿನ ಮೈಲಾರದ ಐತಿಹಾಸಿಕ ಮೈಲಾರಲಿಂಗ ಸಂಪಾಯಿತಲೇ ಪರಾಕ್ ಎಂದು ನುಡಿದಿದ್ದ ಕಾರ್ಣಿಕ ನಿಜವಾಗಿತ್ತು.
ದೈವವಾಣಿಯಂತೆ ರಾಜ್ಯದಲ್ಲಿ ಮಳೆ ಉತ್ತಮವಾಗಿತ್ತು. 2023ರಲ್ಲಿ ಬರಗಾಲದಿಂದ ತತ್ತರಿಸಿದ್ದ ಕರ್ನಾಟಕ ರಾಜ್ಯಕ್ಕೆ ಈ ಕಾರ್ಣಿಕ ನಿಟ್ಟುಸಿರು ಬಿಡುವಂತೆ ಮಾಡಿತ್ತು. ನಂಬಿಕೆಯಂತೆ ರಾಜ್ಯಾದ್ಯಂತ ಭರ್ಜರಿ ಮಳೆಯಾಗಿದ್ದು, ಎಲ್ಲಾ ಜಲಾಶಯಗಳು ತುಂಬಿ ಹರಿದಿವೆ.