ಕಲಬುರಗಿ: ” ನಮ್ಮಲ್ಲಿ ತೀರ್ಮಾನ ಮಾಡಿಕೊಂಡು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಹಾಕುತ್ತೇವೆ. ಲಿಂಗಾಯತ ಕೋಟಾ ಬಂದರೆ ನಾನೇ ಅಭ್ಯರ್ಥಿ” ಎಂದು ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ,” ಭೇಟಿ ಮಾಡಲು ಎಲ್ಲ ರಾಷ್ಟ್ರೀಯ ನಾಯಕರು ಸಮಯ ನೀಡಿದ್ದಾರೆ. ಸುಮ್ಮ ಸುಮ್ಮನೆ ದೆಹಲಿಗೆ ಹೋಗಲು ನಾವೇನು ಹುಚ್ಚರಾ?” ಎಂದು ಪ್ರಶ್ನಿಸಿದರು.
4 – 5 ದಿನದಲ್ಲಿ ಸರಿಹೋಗುತ್ತೆ ಮತ್ತೆ ಮುಂದುವರಿಯುವ ವಿಜಯೇಂದ್ರ ವಿಶ್ವಾಸ ಹೇಳಿಕೆಗೆ ಟಾಂಗ್ ನೀಡಿದ ಶಾಸಕ ಯತ್ನಾಳ್ ”ಮೊದಲು ರಾಜ್ಯಾಧ್ಯಕ್ಷರ ಚುನಾವಣೆ ನಡೆಯಲಿ. ವಿಜಯೇಂದ್ರ ಹೋದರೆ ಮುಂದಿನ ನಾಲ್ಕೈದು ದಿನದಲ್ಲಿ ಪಕ್ಷದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ,” ಎಂದು ಹೇಳಿದರು.