ಪಣಜಿ: ತೆಲುಗು ಚಲನಚಿತ್ರ ನಿರ್ಮಾಪಕ ಕೆ ಪಿ ಚೌಧರಿ(44) ಅವರ ಪಾರ್ಥಿವ ಶರೀರ ಸೋಮವಾರ (ಫೆ.03 ರಂದು) ಉತ್ತರ ಗೋವಾದ ಹಳ್ಳಿಯೊಂದರ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಪಿ ಚೌಧರಿ ರಜನಿಕಾಂತ್ ಅಭಿನಯದ “ಕಬಾಲಿ” ಚಿತ್ರವನ್ನು ತೆಲುಗು ಭಾಷೆಯಲ್ಲಿ ನಿರ್ಮಿಸಿದ್ದರು. ಅಂಜುನಾ ಪೊಲೀಸ್ ಠಾಣೆಯ ಸಿಯೋಲಿಮ್ ಹೊರಠಾಣೆಗೆ ಸಾವಿನ ಬಗ್ಗೆ ಮಾಹಿತಿ ಸಿಕ್ಕಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.