ಬೆಂಗಳೂರು : ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಊರನ್ನೇ ತೊರೆದಿದ್ದಾರೆ ಎಂದು ಆರೋಪಗಳು ವ್ಯಕ್ತವಾಗಿದೆ. ಈ ಸಂಬಂಧ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿದ್ದು, ಇದಕ್ಕೆ ಸುಗ್ರೀವಾಜ್ಞೆ ಜಾರಿಗೆ ತರುವ ಹೊಸ್ತಿಲಲ್ಲೇ ಮೈಕ್ರೋ ಫೈನಾನ್ಸ್ಗಳು ಪತ್ರಿಕೆಗಳಲ್ಲಿ ಜಾಹಿರಾತು ನೀಡುವ ಮೂಲಕ ಸರ್ಕಾರಕ್ಕೆ ತಿರುಗೇಟು ನೀಡಿದೆ
ಆರ್.ಬಿ.ಐ ಸೂಚಿಸಿದಂತೆ, ಜವಾಬ್ದಾರಿಯುತ ‘ಮೈಕ್ರೋಷನಾನ್’ ಆರ್ಥಿಕ ಸಂಸ್ಥೆಗಳು, ವ್ಯವಹಾರದ ನಿಯಮಗಳನ್ನು ಪಾಲನೆ ಮಾಡಲು, ದೇಶದ ಮಟ್ಟದಲ್ಲಿ ‘ಸಾಧನ್’ ಸಂಸ್ಥೆಯನ್ನು ಸ್ವ ನಿಯಂತ್ರಣ ಸಂಸ್ಥೆಯಾಗಿ ಸ್ಥಾಪಿಸಿವೆ. ಇದರೊಡನೆ ಕರ್ನಾಟಕದಲ್ಲಿ AKM( Association of Karnataka Microfinance Institutions) ಸಂಸ್ಥೆ ಸಹ ಕೈಜೋಡಿಸಿ ಆರ್ಬಿಐ ಸಂಸ್ಥೆ ನಿಯಮಗಳ ಅನುಸರಣೆ, ಮೇಲುಸ್ತುವಾರಿ ಮತ್ತು ಗ್ರಾಹಕರ ಕುಂದು ಕೊರತೆಗಳಿಗೆ ಸಮಯೋಚಿತ ಪರಿಹಾರ ನೀಡುವ 5 ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ ‘ಮೈಕ್ರೋಫೈನಾನ್ಸ್’ ಸಂಸ್ಥೆಗಳು ಗ್ರಾಹಕ ಸ್ನೇಹಿಯಾಗಿ (Code of Conduct) ರೂಪಿಸಿ, ಅವುಗಳ ಪಾಲನೆಯ ಉಸ್ತುವಾರಿ ಮಾಡುತ್ತಿದ್ದಾರೆ ಎಂದು ಮೈಕ್ರೋಪೈನಾನ್ಸ್ ಸಂಸ್ಥೆಗಳ ಸಂಘ ಸ್ಪಷ್ಟಪಡಿಸಿದೆ.
ದೀನದಯಾಳ ಅಂತ್ಯೋದಯ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ಕರ್ನಾಟಕ ರಾಜ್ಯ ಸರ್ಕಾರವು ‘ಸಂಜೀವಿನಿ’ ಸಂಸ್ಥೆಯ ಮೂಲಕ ಕಿರುನಾಲವನ್ನು ಸ್ವಸಹಾಯ ಸಂಘ ಮತ್ತು ಬ್ಯಾಂಕುಗಳ ಜೋಡನೆಯ ಮೂಲಕವು ಸದಸ್ಯರಿಗೆ ತಲುಪಿಸುತ್ತಿದೆ ಎಂದು ಮೈಕ್ರೋಫೈನಾನ್ಸ್ ಕಂಪನಿ ಸಂಘ ತಿಳಿಸಿದೆ.