
ಚನ್ನಮ್ಮನಕಿತ್ತೂರು: ಪಟ್ಟಣ ಪಂಚಾಯತಿಯ ಅದ್ಯಕ್ಷರಾಗಿ ಜೈಸಿದ್ದರಾಮ ಮಾರಿಹಾಳ ಹಾಗೂ ಉಪಾಧ್ಯಕ್ಷರಾಗಿ ಸುಮಯಾ ಸುತಗಟ್ಟಿಯವರು ಆಯ್ಕೆಯಾಗಿದ್ದಾರೆ
ಚುನಾವಣೆ ನಡೆದ ದಿನಾಂಕ 27-12-2021 ಈ ಹಿಂದೆ ಅಂದರೆ 03-09-2024 ರಂದು ರಾಜ್ಯದ ಎಲ್ಲಾ ಪಟ್ಟಣ ಪಂಚಾಯತಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗಳು ನಡೆದ ಸಂದರ್ಭದಲ್ಲಿ ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯತ ಭಾರತೀಯ ಜನತಾ ಪಕ್ಷದ ಪಟ್ಟಣ ಪಂಚಾಯತ ಸದಸ್ಯ ನಾಗರಾಜ ಅಸುಂಡಿ ಅವರನ್ನು ಕಾಂಗ್ರೇಸ್ ಪಕ್ಷದ ಕೆಲವರು ಅಪಹರಿಸಿದ ಕಾರಣ ಚುನಾವಣೆಯನ್ನು ಮುಂದೂಡಲಾಗಿತ್ತು ಇಂದು ಚುನಾವಣೆ ಜರುಗಿತು.
ಚುನಾವಣೆಯಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಸಮಬಲ ಆದುದರಿಂದ ಚೀಟಿ ಎತ್ತುವ ಮೂಲಕ ಚುನಾವಣೆ ಪ್ರಕ್ರೀಯೆ ಜರುಗಿತು ಚೀಟಿ ಎತ್ತಿದಾಗ ಅಧ್ಯಕ್ಷರಾಗಿ ಜೈಸಿದ್ದರಾಮ ಮಾರಿಹಾಳ ಹಾಗೂ ಉಪಾಧ್ಯಕ್ಷರಾಗಿ ಸುಮಯಾ ಸುತಗಟ್ಟಿಯವರು ಆಯ್ಕೆಯಾಗಿದ್ದಾರೆ.
ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕ ಬಾಬಾಸಾಹೇಬ ಪಾಟೀಲ ಅವರು ಎಲ್ಲರಿಗೂ ಸಿಹಿ ಹಂಚಿ ಪಟಾಕಿ ಹೊಡೆದು ಸಂಭ್ರಮಿಸಿದರು.