ನವದೆಹಲಿ, ಜನವರಿ 17: ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ರಷ್ಯಾ ಪರವಾಗಿ ಹೋರಾಡುತ್ತಿರುವ ಒಟ್ಟು 126 ಭಾರತೀಯರಲ್ಲಿ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇಂದು ತಿಳಿಸಿದ್ದಾರೆ.
ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ರಷ್ಯಾ ಪರವಾಗಿ ಹೋರಾಡುತ್ತಿರುವ ಒಟ್ಟು 126 ಭಾರತೀಯರಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ ಮತ್ತು 16 ಭಾರತೀಯರು ಕಾಣೆಯಾಗಿದ್ದಾರೆ. ಇದುವರೆಗೂ 96 ಮಂದಿ ಭಾರತಕ್ಕೆ ವಾಪಾಸ್ ಬಂದಿದ್ದಾರೆ, 18 ಮಂದಿ ಇನ್ನೂ ಭಾರತಕ್ಕೆ ಮರಳಿಲ್ಲ ಎಂದು ಅವರು ಹೇಳಿದ್ದಾರೆ.
ರಷ್ಯಾದ ಸೈನ್ಯದಲ್ಲಿ ಮುಂಚೂಣಿಯಲ್ಲಿ ಹೋರಾಡುತ್ತಾ ಸಾವನ್ನಪ್ಪಿದ ಕೇರಳದ ವ್ಯಕ್ತಿ ಬಿನಿಲ್ ಬಾಬು (32) ಅವರ ಸಾವಿನ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಈ ಘಟನೆಯನ್ನು ‘ದುರದೃಷ್ಟಕರ’ ಎಂದು ಕರೆದಿದ್ದಾರೆ.
ನಮ್ಮ ರಾಯಭಾರ ಕಚೇರಿ ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಇದರಿಂದಾಗಿ ಅವರ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರಬಹುದು” ಎಂದು ಹೇಳಿದ್ದಾರೆ.