
ಚನ್ನಮ್ಮನ ಕಿತ್ತೂರು, ಜನವರಿ,16: ಇವತ್ತಿನ ಸ್ಪರ್ಧಾತ್ಮಕ ಪರಿಕ್ಷೆಗಳಲ್ಲಿ ವಿದ್ಯಾರ್ಥಿಗಳು ಎಲ್ಲ ವರ್ಗದ ವಿಚಾರಗಳನ್ನು ಓದಬೇಕು, ಮುಖ್ಯವಾಗಿ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ರೋಹಿಣಿ ಪಾಟೀಲ ತಿಳಿಸಿದರು.
ಬೈಲೂರು ಗ್ರಾಮದ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿದ ರೋಹಿಣಿ ಅವರು, ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಓದಿಗೆ ಮೀಸಲಿಟ್ಟರೆ ಬದುಕಿನಲ್ಲಿ ಉದ್ಯೋಗ, ಸಾಧನೆಯ ಪಥ ಸುಲಭ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಲದ್ದಿಮಠ, ಹಿರಿಯರು, ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.