
ಎಂ.ಕೆ. ಹುಬ್ಬಳ್ಳಿ ಮತ್ತು ಹೊಸಕಾದರವಳ್ಳಿ ಕ್ಲಸ್ಟರ್‌ಗಳ ನಲಿ ಕಲಿ ಶಿಕ್ಷಕರಿಗೆ ಆಪ್ತಾಲೋಚನೆ ಸಭೆ ನಡೆಯಿತು.
ಸಭೆಗೆ ಶ್ರೀ ಎಮ್.ಐ. ಗುಂಡಗಾವಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ನಲಿ ಕಲಿ ಶಿಕ್ಷಣದ ತಂತ್ರಗಳು, ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಕ್ಲಿಷ್ಟಾಂಶಗಳ ಕುರಿತು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ, ಪ್ರಾಯೋಗಿಕ ಪಾಠವನ್ನು ಶ್ರೀಮತಿ ಆರ್.ಡಿ. ಕಿತ್ತೂರ ಅವರು ಪ್ರಾತ್ಯಕ್ಷಿಕವಾಗಿ ನಡೆಸಿ, ಪಾಠದಲ್ಲಿ ಬರುವ ಕಠಿಣ ಅಂಶಗಳ ಪರಿಹಾರ ಕುರಿತು ವಿವರಿಸಿದರು.
ಸಭೆಯಲ್ಲಿ ಪ್ರಮುಖವಾಗಿ ಭಾಗವಹಿಸಿದವರು ಪ್ರಧಾನ ಗುರುಗಳಾದ ಕೆ.ಡಿ. ಹೊಳಿ ಹಾಗೂ ಶಾಲಾ ಶಿಕ್ಷಕರಾದ ಎಮ್.ಎಸ್. ಕಲ್ಮಠ, ಜಿ.ಜಿ. ಜುಟ್ಟನ್ನವರ, ಆರ್.ಆರ್. ಗಲಗಲಿ, ಸಲ್ಮಾ ಮುಲ್ಲಾ, ವಾಯ್.ಎಸ್. ಪಾಟೀಲ, ಸುಜಾತಾ ವಾಘರವಾಡಿ, ರಾಜೇಶ್ವರಿ ಶೇಬನ್ನವರ.ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಎಮ್.ಐ. ಗುಂಡಗಾವಿ, ಎರಡು ಕ್ಲಸ್ಟರ್‌ಗಳ ನಲಿ ಕಲಿ ಶಿಕ್ಷಕರು ಸೇರಿದಂತೆ ಸಭೆಗೆ ಎಲ್ಲಾ ಶಿಕ್ಷಕರು ಹಾಜರಿದ್ದರು.
ಈ ಚರ್ಚೆಯಲ್ಲಿ ಹಲವು ಪ್ರಶ್ನೋತ್ತರಗಳ ಮೂಲಕ ಶಿಕ್ಷಕರು ತಮ್ಮ ಅನುಭವ ಹಂಚಿಕೊಂಡರು.ಈ ಕಾರ್ಯಕ್ರಮವು ನಲಿ ಕಲಿ ಶಿಕ್ಷಕರಿಗೆ ಪಾಠ ಕಲಿಕೆಯಲ್ಲಿ ಮಹತ್ವಪೂರ್ಣ ಮಾರ್ಗದರ್ಶನ ಒದಗಿಸುವಲ್ಲಿ ಯಶಸ್ವಿಯಾಯಿತು.