Home ರಾಜಕೀಯ ಹಲ್ಲೆಗೆ ಪ್ರಚೋದನೆ ಆರೋಪ; ರಾಹುಲ್ ಗಾಂಧಿ ಮೇಲೆ FIR

ಹಲ್ಲೆಗೆ ಪ್ರಚೋದನೆ ಆರೋಪ; ರಾಹುಲ್ ಗಾಂಧಿ ಮೇಲೆ FIR

0
ಹಲ್ಲೆಗೆ ಪ್ರಚೋದನೆ ಆರೋಪ; ರಾಹುಲ್ ಗಾಂಧಿ ಮೇಲೆ FIR

ನವದೆಹಲಿ, ಡಿಸೆಂಬರ್ 20 : ಸಂಸತ್​ ಆವರಣದಲ್ಲಿ ಸಂಸದರ ಪ್ರತಿಭಟನೆಯ ವೇಳೆ ನಡೆದ ತಿಕ್ಕಾಟದಲ್ಲಿ ಹಲ್ಲೆ, ಪ್ರಚೋದನೆ ನೀಡಿದ ಆರೋಪದ ಮೇಲೆ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಹಾಗೂ ಇತರೆ ಸಂಸದರ ವಿರುದ್ಧ ವಿರುದ್ಧ ದೆಹಲಿ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ಬಿಜೆಪಿ ನೀಡಿದ ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (ನೋವುಂಟು ಮಾಡುವುದು), 117 (ಗಾಯ ಮಾಡುವುದು), 125 (ಇತರರ ಜೀವಕ್ಕೆ ಅಪಾಯ), 131 (ಅಪರಾಧ ಶಕ್ತಿ ಬಳಕೆ), 351 (ಬೆದರಿಕೆ) ಆರೋಪಗಳಡಿ ಎಫ್​​ಆರ್​​ಐ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲಂ 109, 115, 117, 125, 131 ಮತ್ತು 351 ಅಡಿಯಲ್ಲಿ ಬಿಜೆಪಿ ದೂರು ದಾಖಲಿಸಿದೆ. ಸೆಕ್ಷನ್ 109 ಕೊಲೆ ಯತ್ನದ ವಿಭಾಗವಾಗಿದೆ, ಸೆಕ್ಷನ್ 117 ಉದ್ದೇಶಪೂರ್ವಕವಾಗಿ ಗಂಭೀರ ಗಾಯವನ್ನು ಉಂಟುಮಾಡುತ್ತದೆ. ಆದರೆ, ದೆಹಲಿ ಪೊಲೀಸರು ರಾಹುಲ್ ಗಾಂಧಿ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 109ರ ಅಡಿಯಲ್ಲಿ ಕೊಲೆ ಯತ್ನದ ಅಡಿಯಲ್ಲಿ ಪ್ರಕರಣ ದಾಖಲಿಸದಿರಲು ನಿರ್ಧರಿಸಿದ್ದಾರೆ.

ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಆರೋಪದ ಮೇಲೆ ಗುಹುವಾಹ ಸಂಸತ್ ಭವನದೊಳಗೆ ವಿರೋಧ ಪಕ್ಷದ ಸಂಸದರು ಮತ್ತು ಬಿಜೆಪಿ ಸದಸ್ಯರ ನಡುವೆ ಘರ್ಷಣೆಯಾಗಿ ಎದುರಾಗಿತ್ತು

LEAVE A REPLY

Please enter your comment!
Please enter your name here