Home ಅಂತರರಾಷ್ಟ್ರೀಯ ಮಾಜಿ ಸಚಿವ ಅಂಡರ್ವೇರ್ ಬಳಸಿ ಆತ್ಮಹತ್ಯೆಗೆ ಯತ್ನ! ರಕ್ಷಣಾ ಸಚಿವನನ್ನು ರಕ್ಷಿಸಿದ್ದು ಯಾರು? suicide Attempt ಮಾಡಿದ್ದು ಯಾಕೆ?

ಮಾಜಿ ಸಚಿವ ಅಂಡರ್ವೇರ್ ಬಳಸಿ ಆತ್ಮಹತ್ಯೆಗೆ ಯತ್ನ! ರಕ್ಷಣಾ ಸಚಿವನನ್ನು ರಕ್ಷಿಸಿದ್ದು ಯಾರು? suicide Attempt ಮಾಡಿದ್ದು ಯಾಕೆ?

0
ಮಾಜಿ ಸಚಿವ ಅಂಡರ್ವೇರ್ ಬಳಸಿ ಆತ್ಮಹತ್ಯೆಗೆ ಯತ್ನ! ರಕ್ಷಣಾ ಸಚಿವನನ್ನು ರಕ್ಷಿಸಿದ್ದು ಯಾರು? suicide Attempt ಮಾಡಿದ್ದು ಯಾಕೆ?

ದಕ್ಷಿಣ ಕೊರಿಯಾದಲ್ಲಿ ಮಿಲಿಟರಿ ಆಡಳಿತ ಅನುಷ್ಠಾನದ ಕುರಿತು ತನಿಖೆ ನಡೆಯುತ್ತಿದೆ. ಏತನ್ಮಧ್ಯೆ, ಈ ಪ್ರಕರಣದಲ್ಲಿ ಬಂಧಿತರಾದ ಮಾಜಿ ರಕ್ಷಣಾ ಸಚಿವ ಕಿಮ್ ಯೋಂಗ್ ಹ್ಯುನ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ರಕ್ಷಿಸಲಾಗಿದೆ.

ಅಧ್ಯಕ್ಷ ಯುನ್ ಸುಕ್ ಯೋಲ್ ಅವರ ‘ತುರ್ತು ಮಿಲಿಟರಿ ಆಡಳಿತ’ ಆದೇಶವನ್ನು ಅನುಷ್ಠಾನಗೊಳಿಸುವಲ್ಲಿ ಕಿಮ್ ಯೋಂಗ್ ಹ್ಯುನ್ ಪಾತ್ರದ ತನಿಖೆಗಾಗಿ ಕಳೆದ ವಾರ ಇಬ್ಬರು ಉನ್ನತ ದಕ್ಷಿಣ ಕೊರಿಯಾದ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ.

ಸಿಯೋಲ್‌ನ ಬಂಧನ ಕೇಂದ್ರದಲ್ಲಿ ಕಿಮ್ ಆತ್ಮಹತ್ಯೆಗೆ ಯತ್ನಿಸಿದರು. ಆದರೆ ಅವರನ್ನು ರಕ್ಷಿಸಲಾಗಿದ್ದು ಈಗ ಅವರು ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಕೊರಿಯಾ ತಿದ್ದುಪಡಿ ಸೇವಾ ಆಯುಕ್ತ ಜನರಲ್ ಶಿನ್ ಯೋಂಗ್ ಹೈ ತಿಳಿಸಿದರು.

ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಿಯೋಲ್ ನ್ಯಾಯಾಲಯವು ಕಿಮ್ ವಿರುದ್ಧ ವಾರಂಟ್ ಹೊರಡಿಸಿದ ನಂತರ ಬುಧವಾರ ಅವರನ್ನು ಬಂಧಿಸಲಾಯಿತು. ಡಿಸೆಂಬರ್ 3ರಂದು ತುರ್ತು ಮಿಲಿಟರಿ ಆಡಳಿತಕ್ಕೆ ಆದೇಶ ನೀಡಿದ ನಂತರ ಬಂಧಿಸಲಾದ ಮೊದಲ ವ್ಯಕ್ತಿ ಕಿಮ್ ಆಗಿದ್ದಾರೆ.

ದಕ್ಷಿಣ ಕೊರಿಯಾದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ವಿರೋಧ ಪಕ್ಷ ಡೆಮಾಕ್ರಟಿಕ್ ಪಕ್ಷವು ಯೂನ್ ವಿರುದ್ಧ ದೋಷಾರೋಪಣೆಗೆ ಹೊಸ ನಿರ್ಣಯವನ್ನು ಮಂಡಿಸುವ ಕೆಲವೇ ಗಂಟೆಗಳ ಮೊದಲು ಈ ಬೆಳವಣಿಗೆ ಸಂಭವಿಸಿದೆ.

ಅಲ್ಲದೆ, ದೇಶದ ಕಾನೂನು ಜಾರಿ ಸಂಸ್ಥೆಗಳು ಅಧ್ಯಕ್ಷರ ಘೋಷಣೆಯು ದಂಗೆಯೇ ಅಥವಾ ಇಲ್ಲವೇ ಎಂಬುದರ ಕುರಿತು ತನಿಖೆ ನಡೆಸುತ್ತಿದೆ. ಕಳೆದ ಶನಿವಾರ ಆಡಳಿತ ಪಕ್ಷವು ಮತದಾನವನ್ನು ಬಹಿಷ್ಕರಿಸಿದ್ದರಿಂದ ಮೊದಲ ದೋಷಾರೋಪಣೆ ಪ್ರಯತ್ನ ವಿಫಲವಾಯಿತು.

LEAVE A REPLY

Please enter your comment!
Please enter your name here