Home ಶಿಕ್ಷಣ ಕಿತ್ತೂರಿನಲ್ಲಿ ನಲಿಕಲಿ ಶಿಕ್ಷಕರ ತರಬೇತಿ: ಪೌಷ್ಟಿಕ ಆಹಾರ ಮತ್ತು ಶಿಕ್ಷಕರ ಪಾತ್ರದ ಮಹತ್ವದ ಕುರಿತು ಚರ್ಚೆ

ಕಿತ್ತೂರಿನಲ್ಲಿ ನಲಿಕಲಿ ಶಿಕ್ಷಕರ ತರಬೇತಿ: ಪೌಷ್ಟಿಕ ಆಹಾರ ಮತ್ತು ಶಿಕ್ಷಕರ ಪಾತ್ರದ ಮಹತ್ವದ ಕುರಿತು ಚರ್ಚೆ

0
ಕಿತ್ತೂರಿನಲ್ಲಿ ನಲಿಕಲಿ ಶಿಕ್ಷಕರ ತರಬೇತಿ: ಪೌಷ್ಟಿಕ ಆಹಾರ ಮತ್ತು ಶಿಕ್ಷಕರ ಪಾತ್ರದ ಮಹತ್ವದ ಕುರಿತು ಚರ್ಚೆ

ಚನ್ನಮ್ಮನ ಕಿತ್ತೂರ, ಡಿಸೆಂಬರ್ 02: ಕಿತ್ತೂರ ಗುರುವಾರ ಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಲಿಕಲಿ ಶಿಕ್ಷಕರ ಎರಡನೇ ಬ್ಯಾಚ್ ತರಬೇತಿಯಲ್ಲಿ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ ಮಾತನಾಡಿ, ಮಕ್ಕಳಿಗೆ ಇಲಾಖೆಯಿಂದ ಬರುತ್ತಿರುವ ಪೂರಕ ಪೌಷ್ಟಿಕಾಂಶಗಳ ಉಪಯುಕ್ತತೆಯನ್ನು ಒತ್ತಿ ಹೇಳಿದರು.

ಅಲ್ಲದೆ, ಆರೋಗ್ಯಕರ ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.ಶಿಕ್ಷಕರು ಕಾಲಕ್ಕೆ ತಕ್ಕಂತೆ ಓದಿನ ಮೂಲಕ ಪರಿವರ್ತನೆ ಹೊಂದಬೇಕು ಎಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ, ಪ್ರಕಾಶ ಮೆಳವಂಕಿ (ಸಹಾಯಕ ನಿರ್ದೇಶಕರು, ಪಿಎಂ ಪೋಷಣ ಅಭಿಯಾನ, ಬೈಲಹೊಂಗಲ), ಬಿ ಆರ್ ಪಿ ಗಳಾದ ಎಮ್. ವಾಯ್ ಕಡಕೋಳ. ಸುನೀತಾಪರಪ್ಪನ್ನವರ ಜ್ಯೋತಿ ಕೋಟಗಿ ಎಸ್ ಆರ್ ಕಾಶಪ್ಪನ್ನವರ ಡಿ ಎಚ್ ಪಾಟೀಲ ಹಾಗೂ ನಲಿಕಲಿ ಸಂಪನ್ಮೂಲ ವ್ಯಕ್ತಿಗಳು ಹಾಗೂ ನಲಿ ಕಲಿ ಶಿಕ್ಚಕರು ಉಪಸ್ಥಿತರಿದ್ದರುಸಿ ಆರ್ ಪಿ ಗಳು ಮತ್ತು ನಲಿಕಲಿ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here