
ಹೈದರಾಬಾದ್, ಡಿಸೆಂಬರ್ 02: ಖ್ಯಾತ ಸಿರೀಯಲ್ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ತಡರಾತ್ರಿ ಹೈದರಾಬಾದ್‌ನಲ್ಲಿ ಘಟನೆ ನಡೆದಿದ್ದು, ಆದರೆ ಇವರ ಸಾವಿಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.
ಎರಡೊಂದ್ಲಾ ಮೂರು, ಎಟಿಎಮ್ , ಒಂದ್ ಕಥೆ ಹೇಳ್ಲಾ, ಜಾಕ್ ಪಾಟ್, ಅಪಾರ್ಟ್‌ಮಂಟ್ ಟು ಮರ್ಡರ್, ವಂದನಾ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ಕಿರುತೆರೆಯಲ್ಲಿ ಬ್ರಹ್ಮಗಂಟು ಹಾಗೂ ನಿನ್ನಿಂದಲೇ ಧಾರಾವಾಹಿಯಲ್ಲಿ ಸಹ ನಟಿಸಿದ್ದರು.
ಇದೀಗ ತೆಲುಗು ಚಿತ್ರರಂಗದಲ್ಲಿ ನಟಿಸುತ್ತಾ ನೆಲೆಸಿದ್ದರು. ಕಳೆದ ವರ್ಷ ಮದುವೆ ಮಾಡಿಕೊಂಡಿದ್ದ ಶೋಭಿತಾ ಶಿವಣ್ಣ ಅರು ಇದೀಗ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆ ನಡೆದ ನಂತರ ನಟಿಯ ಮೃತದೇಹವನ್ನು ಬೆಂಗಳೂರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.. ಆತ್ಮಹತ್ಯೆ ಮಾಡಿಕೊಂಡ ಈ ಚೆಲುವೆ ಸಾವಿಗೂ ಮುನ್ನ ಪೋಟೋವೊಂದನ್ನು ಶೇರ್ ಕೂಡಾ ಮಾಡಿದ್ದಾರೆ.. ಅದರ ಬಳಿಕವೇ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.. ಆದರೆ ಇವರ ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂಬುದು ತಿಳಿದುಬಂದಿಲ್ಲ