
ಬೆಳಗಾವಿ, ನವೆಂಬರ್ 30: ಇಂದು ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಇರೋ ಜಿಲ್ಲಾ ಔಷಧೀಯ ಉಗ್ರಾಣದ ಮೇಲೆ ದಿಢೀರ್ ಲೋಕಾಯುಕ್ತ ದಾಳಿ ನಡೆಸಿದೆ.
ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ 8 ಜನ ಅಧಿಕಾರಿಗಳ ತಂಡದ ದಾಳಿ ವೇಳೆ ಪಿ.ಬಿ.ಐ ಸಂಸ್ಥೆ ಸರಬರಾಜು ಮಾಡಿರುವ ಐವಿ ಗ್ಲುಕೋಸ್ ಬಾಕ್ಸಗಳು ಪತ್ತೆಯಾಗಿವೆ.
ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿ ಇಟ್ಟಿದ್ದ ಬಾಕ್ಸ್ ಕಂಡು ಸ್ವಯಂ ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಗೂ ಪಿ.ಬಿ.ಐ ಸಂಸ್ಥೆಯಿಂದ ಆರ.ಎಲ್.ಐ ಐವಿ ಗ್ಲುಕೋಸ್ ಏಪ್ರಿಲ್ ತಿಂಗಳಿಂದಲೇ ಪೂರಕೆ ಆಗಿದೆ.
ಇದನ್ನೇ ಈಗಾಗಲೇ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪೂರೈಕೆ ಆಗಿರೋ ವಿಚಾರವು ಲೋಕಾಯುಕ್ತ ದಾಳಿ ವೇಳೆ ಬೆಳಕಿಗೆ ಬಂದಿದೆ.
ಸ್ವತಃ ಲೋಕಾಯುಕ್ತ ಎಸ್ಪಿ ಹನುಮಂತರಾಯ ಉಗ್ರಾಣದಲ್ಲಿ ಶೇಖರಿಸಿ ಇಡಲಾಗಿರೋ ಪ್ರತಿಯೊಂದು ಔಷಧೀಯಗಳನ್ನ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕೆಲವು ಔಷಧಿಗಳ ಬಳಕೆಯ ಅವಧಿ ಮುಗಿದರು ಉಗ್ರಾಣದಲ್ಲಿ ಶೇಖರಿಸಿ ಇಡಲಾಗಿರೋದು ಬೆಳಕಿಗೆ ಬಂದಿದೆ.