Home ಸಾಹಿತ್ಯ ನ.29 ರಂದು ‘ಆತ್ಮದ ಕನ್ನಡಿ’ ಕವನ ಸಂಕಲನ ಬಿಡುಗಡೆ

ನ.29 ರಂದು ‘ಆತ್ಮದ ಕನ್ನಡಿ’ ಕವನ ಸಂಕಲನ ಬಿಡುಗಡೆ

0
ನ.29 ರಂದು ‘ಆತ್ಮದ ಕನ್ನಡಿ’ ಕವನ ಸಂಕಲನ ಬಿಡುಗಡೆ

ನೇಸರಗಿ, ನವೆಂಬರ್ 26: ಇಲ್ಲಿನ ಸರ್ಕಾರಿ ದರ್ಜೆ ಕಾಲೇಜು ಹಾಗೂ ಸಹೃದಯ ಸಾಹಿತ್ಯ ಪ್ರತಿಷ್ಠಾನ (ರ ) ಸವದತ್ತಿ ಇವರ ಸಹಯೋಗದಲ್ಲಿ ಚನ್ನಬಸಯ್ಯ ಪೂಜೇರಿ ರಚಿತ ಆತ್ಮದ ಕವನ ಸಂಕಲನ ಬಿಡುಗಡೆ ಸಮಾರಂಭ ಮತ್ತು ಹಳೆ ವಿದ್ಯಾರ್ಥಿಗಳ ಬೇರು ಚಿಗುರು ಸಭೆಯು 29-11-2024 ರಂದು ಬೆಳ್ಳಿಗೆ 10-30 ಕ್ಕೆ ನೇಸರಗಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಫ್ ಡಿ. ಗದ್ದಿಗೌಡರ, ಕೃತಿ ಬಿಡುಗಡೆಯನ್ನು ಕವಿ, ಕಥೆಗಾರ ಡಾ. ಬಸು ಬೇವಿನಗಿಡದ, ಕೃತಿ ಕುರಿತು ಉಪನ್ಯಾಸವನ್ನು ಯರಗಟ್ಟಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ, ಅಥಿತಿಗಳಾಗಿ ಸವದತ್ತಿಯ ಕವಿಗಳು, ವಿಮರ್ಶಕರಾದ ನಾಗೇಶ ಜೆ. ನಾಯಕ, ಸಹೃದಯ ಸಾಹಿತ್ಯ ಪ್ರತಿಷ್ಠಾಪನದ ಉಪಾಧ್ಯಕ್ಷರಾದ ಬಸವರಾಜ ಪಟ್ಟಣಶೆಟ್ಟಿ, ಕಾಲೇಜು ಹಳೆ ವಿದ್ಯಾರ್ಥಿಗಳ ಸಂಚಾಲಕ ಮಲ್ಲಿಕಾರ್ಜುನ ಕುಂಬಾರ, ಕಾಲೇಜು ವಿದ್ಯಾರ್ಥಿ, ಕವಿ ಚನ್ನಬಸಯ್ಯ ಪೂಜೇರ ಉಪಸ್ಥಿತರಿರುತ್ತಾರೆ ಎಂದು ಸಹೃದಯ ಪ್ರತಿಷ್ಠಾಪನದ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here