
ನವದೆಹಲಿ, ನವೆಂಬರ್ 26: ಭಾರತದ ಪ್ರಜಾಪ್ರಭುತ್ವ ತತ್ವ ನೀತಿ ರೂಪಿಸುವಲ್ಲಿ ಸಂವಿಧಾನ ಪ್ರಮುಖ ಪಾತ್ರ ವಹಿಸಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಸಂವಿಧಾನ ಅಂಗೀಕಾರಗೊಂಡ 75ನೇ ವರ್ಷಾಚರಣೆ ನಿಮಿತ್ತ ಐತಿಹಾಸಿಕ ಸೆಂಟ್ರಲ್ ಹಾಲ್ನಲ್ಲಿ ಸಂಸತ್ತಿನ ಜಂಟಿ ಸದನ ಉದ್ದೇಶಿಸಿ ಮುರ್ಮು ಅವರು ಮಾತನಾಡಿದರು.
ಇನ್ನು ಕಾರ್ಯಕ್ರಮದಲ್ಲಿ ಸಂಸ್ಕೃತ ಹಾಗೂ ಮೈಥಾಲಿ ಭಾಷೆಗೆ ಭಾಷಾಂತರಗೊಂಡ ಸಂವಿಧಾನದ ಪ್ರತಿ ಬಿಡುಗಡೆ ಮಾಡಿದರು. ಈ ವೇಳೆ, ಸಂವಿಧಾನದ ಪ್ರಸ್ತಾವನೆ ಓದಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಅನಾವರಣಗೊಳಿಸಿದರು.
ನಮ್ಮ ಸಂವಿಧಾನವೂ ಜೀವಂತ ಮತ್ತು ಪ್ರಗತಿ ದಾಖಲೆಯಾಗಿದೆ. ನಮ್ಮ ಸಂವಿಧಾನದ ಮೂಲಕ ನಾವು ಸಾಮಾಜಿಕ ನ್ಯಾಯ ಮತ್ತು ಎಲ್ಲರ ಒಳಗೊಂಡ ಅಭಿವೃದ್ಧಿಯ ಗುರಿ ಸಾಧಿಸಿದ್ದೇವೆ ಎಂದರು.
ಮಹಿಳಾ ಮೀಸಲಾತಿ ಕಾನೂನಿನ ಕುರಿತು ಮಾತನಾಡಿದ ಅವರು, ಇದು ನಮ್ಮ ಪ್ರಜಾಪ್ರಭುತ್ವದಲ್ಲಿ ಮಹಿಳಾ ಸಬಲೀಕರಣದ ಹೊಸ ಕಾಲವನ್ನು ಆರಂಭಿಸಿದೆ ಎಂದ ಅವರು, ಸಂವಿಧಾನ ರಚನೆಯಲ್ಲಿ ಭಾಗಿಯಾದ 15 ಮಹಿಳಾ ಸದಸ್ಯರಿಗೆ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭ ಸ್ಪೀಕರ್ ಓಂ ಬಿರ್ಲಾ ಸೆರಿದಂತೆ ಇತರ ಪ್ರಮುಖ ನಾಯಕರು ಹಾಜರಿದ್ದರು.