
ಬೆಳಗಾವಿ, ನವೆಂಬರ್ 26: ಜಿಲ್ಲೆಯ ಕಾಗವಾಡ ಪಟ್ಟಣದ ಶಿರಗುಪ್ಪಿ ರಸ್ತೆಯ ಬ್ರಹ್ಮನಾಥ ನೀರಾವರಿ ಪಂಪ ಹತ್ತಿರದ ಸುರೇಶ ಪಾಟೀಲ್ ಡುಮ್ಮಗೋಳ ಎಂಬ ರೈತರ ಜಮೀನಿನಲ್ಲಿ ಹೊತ್ತಿಕೊಂಡ ಬೆಂಕಿ ಮಂಗಾವತಿ ರಸ್ತೆಯವರೆಗೂ ಬೆಂಕಿ ಆವರಿಕೊಂಡು ಅನೇಕ ರೈತರ ಕಬ್ಬು ಸುಟ್ಟು ಕರಕಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿಕೊಂಡ ಬೆಂಕಿಯಿಂದ ಸುಮಾರು 200 ಎಕರೆ ಕಬ್ಬು ಸುಟ್ಟು ಕರಕಲಾಗಿದೆ
ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಸುಮಾರು 200 ಎಕರೆ ಕಬ್ಬು ಸುಟ್ಟು ನಾಶವಾಗಿದೆ ಇದಕ್ಕೆ ನೇರ ಹೊಣೆ ಹೆಸ್ಕಾಂ ಇಲಾಖೆಯವರೇ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕಳೆದ ಬಾರಿಯೂ ಇದೆ ರೀತಿ ಅವಘಡ ಸಂಭವಿಸಿತ್ತು. ಆವಾಗ ಎಚ್ಚೆತ್ತುಕೊಂಡಿದ್ದರೆ ಈಗ ಈ ರೀತಿ ಅವಘಡ ಸಂಭವಿಸಿ ರೈತರಿಗೆ ನಷ್ಟವಾಗುತ್ತಿರಲಿಲ್ಲ. ಬೆಂಕಿ ಹತ್ತಿದಾಗ ಪೋಲಿಸ್,ಕಂದಾಯ,ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ಯಾರೂ ಸ್ಥಳಕ್ಕೆ ಬಂದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.