
ಚನ್ನಮ್ಮನ ಕಿತ್ತೂರು, ನವೆಂಬರ್ 18: ನನಗೆ ಬಿಜೆಪಿಯಿಂದ ಯಾವುದೇ ಆಫರ್ ಬಂದಿಲ್ಲ. ನಾನು ಆಮಿಷಕ್ಕೆ ಒಳಗಾಗುವ ರಾಜಕಾರಣಿ ಅಲ್ಲ ಎಂದು ಕಿತ್ತೂರು ಕಾಂಗ್ರೆಸ್ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಅವರ ಪರವಾಗಿ ಇದ್ದೇನೆ. ನಮ್ಮದು ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದ ಸರ್ಕಾರ. ಹೀಗಾಗಿ 5ವರ್ಷ ಸುಭದ್ರವಾಗಿ ಇರುತ್ತದೆ ಎಂದು ಶಾಸಕ ಪಾಟೀಲ ಹೇಳಿದರು.
ಅಲ್ಲದೇ ಬಿಜೆಪಿಯಿಂದ 100ಕೋಟಿ ರೂಪಾಯಿ ಆಫರ್ ವಿಚಾರಕ್ಕೆ ಪ್ರತಿಕ್ರಿಯಿಸಿ , ಯಾರು ಆಫರ್ ಮಾಡಿಲ್ಲ, ಹಿಂದೆ ಆಫರ್ ಮಾಡಿದ್ರು. ಆದನ್ನು ಹಿರಿಯರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.