Home ಸಾಹಿತ್ಯ ನದೀಮ ಸನದಿ ಅವರ ಕೃತಿ ಲೋಕಾರ್ಪಣೆ

ನದೀಮ ಸನದಿ ಅವರ ಕೃತಿ ಲೋಕಾರ್ಪಣೆ

0
ನದೀಮ ಸನದಿ ಅವರ ಕೃತಿ ಲೋಕಾರ್ಪಣೆ

ಬೆಳಗಾವಿ: ಇಲ್ಲಿನ ಸಪ್ನ ಬುಕ್ ಹೌಸಿನಲ್ಲಿ ಶನಿವಾರ ದಿನಾಂಕ 09 ನೇ ನವೆಂಬರ್ 2024 ರಂದು ಸಂಜೆ 4:30 ಗಂಟೆಗೆ ಯುವ ಕವಿ ನದೀಮ ಸನದಿ ಅವರ “ಪ್ರತಿರೋಧ ಮತ್ತು ಪ್ರಿಯತಮೆ” ಕವನ ಸಂಕಲನದ ಲೋಕಾರ್ಪಣಾ ಸಮಾರಂಭವನ್ನು ಆಯೋಜಿಸಲಾಗಿದೆ. ಗದುಗಿನ ಪರಮಪೂಜ್ಯ ತೋಂಟದ ಡಾ. ಸಿದ್ಧರಾಮ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದು, ಡಾ. ಬಸವರಾಜ ಜಗಜಂಪಿ ಅವರು ಸಂಕಲನವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಉರ್ದು ಕವಿ ಶ್ರೀ. ಎಂ. ಎಂ. ಮಿರ್ಜಾ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಡಾ. ಎಚ್. ಬಿ. ಕೋಲ್ಕಾರ್ ಕೃತಿ ಪರಿಚಯಿಸುವರು. ಆಸಕ್ತರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಪ್ರಕಟಣೆಯೊಂದರಲ್ಲಿ ಕೋರಲಾಗಿದೆ

LEAVE A REPLY

Please enter your comment!
Please enter your name here