
ಬೆಳಗಾವಿ, ನವೆಂಬರ್ 03 : ಕರ್ನಾಟಕ ರಾಜ್ಯೋತ್ಸವಕ್ಕೆ (Karnataka Rajyotsava) ಪ್ರತಿಯಾಗಿ ಎಂಇಎಸ್ (MES) ನಡೆಸಿದ ಕರಾಳ ದಿನಾಚರಣೆ ಸಂಬಂಧ 45ಕ್ಕೂ ಹೆಚ್ಚು ಎಂಇಎಸ್ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾಡಳಿತ ಕರಾಳ ದಿನಾಚರಣೆಗೆ ಅನುಮತಿ ನೀಡದಿದ್ದರೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮನವಿಗೆ ಸ್ಪಂದಿಸಿ ಕಾರ್ಯಕರ್ತರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದರು.
ಮಾಜಿ ಶಾಸಕ ಮನೋಹರ ಕಿಣೇಕರ, ಮಾಜಿ ಮೇಯರ್ ಮಾಲೋಜಿ ಅಷ್ಟೇಕರ, ಪ್ರಕಾಶ ಮರಗಾಳೆ, ರಮಾಕಾಂತ ಕೊಂಡುಸ್ಕರ್, ರಂಜಿತ್ ಚವ್ಹಾಣ, ಅಮರ ಯಳೂರಕರ, ಗಜಾನನ ಪಾಟೀಲ, ನೇತಾಜಿ ಜಾಧವ, ಅಂಕುಶ ಕೇಸರಕರ, ವಿಕಾಸ ಕಲಘಟಗಿ, ಮದನ ಬಾಮನೆ, ಸಚಿನ ಕೇಳೇಕರ, ಪ್ರಶಾಂತ ಭಾಮನೆ, ಪ್ರಶಾಂತ್, ಕಿರಣ್ ಗಾವಡೆ, ಮಹಾದೇವ ಪಾಟೀಲ, ಶುಭಂ ಶೆಲ್ಕೆ, ರೇಣು ಕಿಲ್ಲೇಕರ್, ಸರಸ್ವತಿ ಪಾಟೀಲ, ಸರಿತಾ ಪಾಟೀಲ, ಕಿರಣ ಹುದ್ದಾರ್, ದತ್ತಾ ಉಘಾಡೆ, ಶ್ರೀಕಾಂತ ಕದಂ, ಚಂದ್ರಕಾಂತ ಕೊಂಡುಸ್ಕರ, ಸಂತೋಷ ಕೃಷ್ಣಾಚೆ, ಗುಂಡು ಕದಂ, ಸುನೀಲ ಬಾಳೇಕುಂದ್ರಿ, ಗಣೇಶ ದಡ್ಡಿಕರ, ಪ್ರಕಾಶ ಶಿರೋಲ್ಕರ್, ಆರ್. ಎಂ. ಚೌಗುಲೆ, ಸುಧೀರ ಚವ್ಹಾಣ, ಮಲ್ಲಪ್ಪ ಪಾಟೀಲ, ನಾಗೇಶ ಪಾಟೀಲ, ಸೂರಜ್ ಯಳ್ಳೂರಕರ, ಶ್ರೀಕಾಂತ ಚವ್ಹಾಣ, ಸದಾ ಚವ್ಹಾಣ, ಕಿರಣ ಮೋದಗೇಕರ, ಶಿವಾಜಿ ಮಂಡೋಳಕರ ಸೇರಿದಂತೆ ಹಲವು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.