Home ಸ್ಥಳೀಯ ನಮ್ಮದು ಕನ್ನಡ ನೆಲದ ಸರ್ಕಾರ! ಕನ್ನಡಕ್ಕೆ ಮೊದಲ ಆದ್ಯತೆ; ಕನ್ನಡಿಗರೇ ಸಾರ್ವಭೌಮರು ಎಂದ ಸಚಿವೆ ಹೆಬ್ಬಾಳ್ಕರ್

ನಮ್ಮದು ಕನ್ನಡ ನೆಲದ ಸರ್ಕಾರ! ಕನ್ನಡಕ್ಕೆ ಮೊದಲ ಆದ್ಯತೆ; ಕನ್ನಡಿಗರೇ ಸಾರ್ವಭೌಮರು ಎಂದ ಸಚಿವೆ ಹೆಬ್ಬಾಳ್ಕರ್

0
ನಮ್ಮದು ಕನ್ನಡ ನೆಲದ ಸರ್ಕಾರ! ಕನ್ನಡಕ್ಕೆ ಮೊದಲ ಆದ್ಯತೆ; ಕನ್ನಡಿಗರೇ ಸಾರ್ವಭೌಮರು ಎಂದ ಸಚಿವೆ ಹೆಬ್ಬಾಳ್ಕರ್

ಉಡುಪಿ, ನವೆಂಬರ್ 01: ಉಡುಪಿ ಜಿಲ್ಲಾಡಳಿತ ವತಿಯಿಂದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಪಥ ಸಂಚಲದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಅವರ ಭಾಷಣದ ಪೂರ್ಣ ಪಾಠ ಹೀಗಿದೆ -ಎಲ್ಲಾ ಅತಿಥಿ ಗಣ್ಯರೇ, ಸನ್ಮಾನಿತರೇ, ಸಾರ್ವಜನಿಕ ಬಂಧುಗಳೇ, ಅಧಿಕಾರಿಗಳೇ, ವಿದ್ಯಾರ್ಥಿಗಳೇ ಹಾಗೂ ಮಾಧ್ಯಮ ಸ್ನೇಹಿತರೇ ಅತ್ಯಂತ ಸಂಭ್ರಮ, ಸಡಗರ ಹಾಗೂ ವೈಭವಯುತವಾಗಿ ಆಚರಿಸುತ್ತಿರುವ ಇಂದಿನ 69 ನೇ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತೇನೆ ಎಂದರು.

ಈ ವೇಳೆ ಉಡುಪಿ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್,ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ್ ಸುರೇಂದ್ರ ಅಡಿಗ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here