Home ಕರ್ನಾಟಕ ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವಿನಲ್ಲಿ ಕರಂದ್ಲಾಜೆ ಕೈವಾಡ? ಗಂಭೀರ ಆರೋಪದಡಿ ತನಿಖೆಗೆ ಅಗ್ರಹಿಸಿದ ಸಚಿವ ಭೈರತಿ ಸುರೇಶ

ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವಿನಲ್ಲಿ ಕರಂದ್ಲಾಜೆ ಕೈವಾಡ? ಗಂಭೀರ ಆರೋಪದಡಿ ತನಿಖೆಗೆ ಅಗ್ರಹಿಸಿದ ಸಚಿವ ಭೈರತಿ ಸುರೇಶ

0
ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವಿನಲ್ಲಿ ಕರಂದ್ಲಾಜೆ ಕೈವಾಡ? ಗಂಭೀರ ಆರೋಪದಡಿ ತನಿಖೆಗೆ ಅಗ್ರಹಿಸಿದ ಸಚಿವ ಭೈರತಿ ಸುರೇಶ

ಬೆಂಗಳೂರು, ಅಕ್ಟೋಬರ್ 21: ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರ ಇದೆ ಎಂದು ನನಗೆ ಅನುಮಾನ ಇದೆ ಎಂದು ನಾಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಗಂಭೀರ ಆರೋಪ ಮಾಡಿದ್ದಾರೆ.


ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಳ್ಳೆಯವರು.
ಅವರ ಮಕ್ಕಳು ಕೂಡ ಒಳ್ಳೆಯವರು. ಹಾಗಾದರೆ,
ಯಡಿಯೂರಪ್ಪನವರ ಪತ್ನಿ ಮೈತ್ರಾ ದೇವಿ ಅವರ ಸಾವು
ಹೇಗಾಯ್ತು. ಆ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಪಾತ್ರ ಇರುವ ಬಗ್ಗೆ ನನಗೆ ಅನುಮಾನ ಇದೆ. ಅವರ ಸಾವಿನ
ಬಗ್ಗೆ ತನಿಖೆ ಆಗಬೇಕು. ಸಚಿವೆ ಶೋಭಾ ಕರಂದ್ಲಾಜೆ ಅವರ
ಬಂಧನ ಆಗಬೇಕು. ಕೂಡಲೇ ಅವರು ಕೇಂದ್ರ ಸಚಿವ ಸ್ಥಾನಕ್ಕೆ
ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಮೂಲಕ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಚಿವ ಬೈರತಿ ಸುರೇಶ್ ಅವರನ್ನು
ಬಂಧಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಹೇಳಿದ್ದ ಮಾತಿಗೆ ವೈಯಕ್ತಿಕವಾಗಿಯೇ ತಿರುಗೇಟು ನೀಡಿದ್ದಾರೆ.

“ಮುಡಾ ಹಗರಣ ಬಯಲಾಗುತ್ತಿದ್ದಂತೆ ಮುಡಾ ಕಚೇರಿಗೆತರಾತುರಿಯಲ್ಲಿ ತೆರಳಿದ ಸಚಿವ ಬೈರತಿ ಸುರೇಶ್‌ ಅವರು1997ರಿಂದ ಕಚೇರಿಯಲ್ಲಿದ್ದ ಕಡತಗಳನ್ನು ಎತ್ತಿಕೊಂಡು ಬಂದುಸುಟ್ಟು ಹಾಕಿದ್ದಾರೆ,” ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದರು. ಬೈರತಿ ಸುರೇಶ್ ಅವರನ್ನು ಬಂಧಿಸಿದರೆ ಮುಡಾ ಕಡತಗಳ ರಹಸ್ಯ ಬಯಲಾಗಲಿದೆ ಎಂದಿದ್ದರು.

LEAVE A REPLY

Please enter your comment!
Please enter your name here