
ಚನ್ನಮ್ಮನ ಕಿತ್ತೂರು, ಅಕ್ಟೊಬರ್ 19: ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವ-2024ರ 200ನೇ ವಿಜಯೋತ್ಸವ ಆಚರಣೆಗೆ ದಿನಗಣನೆ ಆರಂಭ ಆಗಿದೆ.
ಅಕ್ಟೊಬರ್ 23, 24, 25ರಂದು ನಡೆಯುವ ಕಿತ್ತೂರು ಉತ್ಸವಕ್ಕೆ ಭಾರದ ಸಿದ್ಧತೆ ಶುರುವಾಗಿದೆ. ರಸ್ತೆ ಸ್ವಚ್ಛ, ರಸ್ತೆ ವಿಭಜಕಗಳಿಗೆ ಬಣ್ಣ, ಬಸ್ ನಿಲ್ದಾಣ, ಚನ್ನಮ್ಮ ವೃತ್ತದಲ್ಲಿರುವ ಒಳಸೇತುವೆ ಮೇಲೆ ಇತಿಹಾಸ ಸಾರುವ ಚಿತ್ರಗಳ ಕೆಲಸ ಕಿತ್ತೂರು ಪಟ್ಟಣವನ್ನು ಅಂದಗೊಳಿಸಲಿದೆ.
ಉತ್ಸವಕ್ಕಾಗಿ ಈಗಾಗಲೇ ಮುಖ್ಯ ವೇದಿಕೆ, ಮಾರಾಟ ಮಳಿಗೆ, ಆಟದ ಮೈದಾನ, ಸೇರಿದಂತೆ ಎಲ್ಲ ರೀತಿಯಲ್ಲೂ ಸಿದ್ಧತೆ ಶುರುವಾಗಿದೆ.ಚನ್ನಮ್ಮ ವೃತ್ತದಲ್ಲಿರುವ ವೀರರಾಣಿಯ ಮೂರ್ತಿಯನ್ನು ಬಗೆಬಗೆಯ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಇಡೀ ಪಟ್ಟಣ ಇದೀಗ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.