
ಬೈಲಹೊಂಗಲ, ಅ. 16: 2024- 25 ನೇಯ ಸಾಲಿನಲ್ಲಿ ಸಮನ್ವಯ ಶಿಕ್ಷಣ ಮಧ್ಯವರ್ತನೆಯ ಅಡಿಯಲ್ಲಿ ವಿಶೇಷ ಅಗತ್ಯತೆಯವಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರ ಆಯೋಜನೆ ಮತ್ತು ಸಾಧನ ಸಲಕರಣಗಳನ್ನು ವಿತರಣೆ ಕಿತ್ತೂರ ಶೈಕ್ಷಣಿಕ ವಲಯದ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿಶೇಷ ಅಗ್ಯತೆಯುಳ್ಳ ಮಕ್ಕಳಿಗೆ ಉಚಿತ ವೈದ್ಯಕೀಯ ಮೌಲ್ಯಂಕನ ಶಿಬಿರವನ್ನು ದಿನಾಂಕ 21/10/2024 ರಂದು ಕಾರ್ಮೆಲ್ ವಿದ್ಯಾವಿಕಾಸ ಪ್ರಾಥಮಿಕ ಶಾಲೆ ಬೈಲಹೊಂಗಲ ( ದೇವಲಾಪೂರ ರೋಡ್) ತಾ ಬೈಲಹೊಂಗಲ ಇಲ್ಲಿ ಆಯೋಜನೆ ಮಾಡಲಾಗಿದ್ದು ಪಾಲಕರು ಇದರ ಸದ್ಬಳಕೆ ಮಾಡಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ ವಾಯ್ ತುಬಾಕದ ಹಾಗೂ ಕ್ಷೇತ್ರ ಸಮನ್ವಾಯಾಧಿಕಾರಿಗಳಾದ ಶ್ರೀಮತಿ ಗಾಯತ್ರಿ ಅಜ್ಜಣ್ಣವರ್ ಕೋರಿರುವರು.
ಪಾಲಕರು ಈ ಕೆಳಕಂಡ ದಾಖಲೆಗಳೊಂದಿಗೆ ಹಾಜರಾಗಲು ತಿಳಿಸಲಾಗಿದೆ.
ವಿಕಲಚೇತನ ವಿದ್ಯಾರ್ಥಿಯ ಯು ಡಿ ಐ ಡಿ ಕಾರ್ಡ / ವೈದ್ಯಕೀಯ ಪ್ರಮಾಣ ಪತ್ರ, ವಿಕಲಚೇತನ ವಿದ್ಯಾರ್ಥಿಯ ಆಧಾರ ಕಾರ್ಡ ಪ್ರತಿ, ಪೋಷಕರ ಮಾಸಿಕ ಆದಾಯ ರೂ 22,500/ ರೂ ಕಡಿಮೆ ಇರುವ ದಾಖಲೆ /ಆದಾಯ ಪ್ರಮಾಣ ಪತ್ರ/ ಬಿ ಪಿ ಎಲ್ ಕಾರ್ಡ, ಎರಡು ಪಾಸ್ ಪೋರ್ಟ ಸೈಜ್ ಪೋಟೋ