
ಚಿತ್ರದುರ್ಗ, ಅಕ್ಟೋಬರ್ 07: ಫೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗದ ಮುರುಘಾ ಶ್ರೀಗಳ ಜಾಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಾಕ್ಷಿಗಳ ವಿಚಾರಣೆ ಮುಗಿಯುವವರೆಗೂ ಜಾಮೀನು ನೀಡದಂತೆ ಆದೇಶಿಸಿತ್ತು. ಇದೀಗ ಸಂತ್ರಸ್ತೆಯರು ಸೇರಿದಂತೆ 13 ಮುಖ್ಯ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ.
ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಬಿಡುಗಡೆ ಆದೇಶ ಹೊರಡಿಸಿದ್ದು ಸಂಜೆ ಹೊತ್ತಿಗೆ ಚಿತ್ರದುರ್ಗ ಜೈಲಿಗೆ ಆದೇಶ ತಲುಪಿದ ತಕ್ಷಣ ಮುರುಘಾ ಶ್ರೀ ಬಿಡುಗಡೆಯಾಗಲಿದ್ದಾರೆ.
ಬಿಡುಗಡೆ ನಂತರದಲ್ಲಿ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಇರುವಂತಿಲ್ಲ ಹೀಗಾಗಿ ಶ್ರೀಗಳು ದಾವಣಗೆರೆಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.