Home ಕರ್ನಾಟಕ ಹೆಬ್ಬಾಳ್ಕರ್ ನಿಂದನೆ ಆರೋಪ; ಸಿಟಿ ರವಿ ಬಂಧನ! ಇಂದು ಬಿಜೆಪಿ ಬಂದ್ ಆಚರಣೆ

ಹೆಬ್ಬಾಳ್ಕರ್ ನಿಂದನೆ ಆರೋಪ; ಸಿಟಿ ರವಿ ಬಂಧನ! ಇಂದು ಬಿಜೆಪಿ ಬಂದ್ ಆಚರಣೆ

0
ಹೆಬ್ಬಾಳ್ಕರ್ ನಿಂದನೆ ಆರೋಪ; ಸಿಟಿ ರವಿ ಬಂಧನ! ಇಂದು ಬಿಜೆಪಿ ಬಂದ್ ಆಚರಣೆ

ಚಿಕ್ಕಮಗಳೂರು, ಡಿಸೆಂಬರ್ 20: ಸುವರ್ಣ ಸೌಧ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಅವಾಚ್ಯ ಪದದಿಂದ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರ ತವರು ಜಿಲ್ಲೆ ಚಿಕ್ಕಮಗಳೂರಿನಲ್ಲಿ ಇಂದು ಬಂದ್ ಗೆ ಬಿಜೆಪಿ ಕರೆ ನೀಡಿದೆ.

ಸಿ.ಟಿ. ರವಿ ಬಂಧನವಾಗುತ್ತಿದ್ದಂತೆ ಚಿಕ್ಕಮಗಳೂರಿನಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಸಿಟಿ ರವಿ ಮನೆಗೆ ಆಗಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷರು ಸೇರಿದಂತೆ ಜಿಲ್ಲಾ ಬಿಜೆಪಿ ಸದಸ್ಯರು ಮಹತ್ವದ ಸಭೆ ನಡೆಸಿ, ನಾಳೆ ಚಿಕ್ಕಮಗಳೂರು ನಗರ ಬಂದ್‌ಗೆ ತೀರ್ಮಾನಿಸಿದ್ದಾರೆ.

LEAVE A REPLY

Please enter your comment!
Please enter your name here