
ಬೆಳಗಾವಿ, ನವೆಂಬರ್ 11: ಉಗಾರ ಖುರ್ದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಫರೀದಖಾನ ವಾಡಿಯ ತೋಟದ ಪ್ರದೇಶದಲ್ಲಿ ಶನಿವಾರ ತಾಯಿ ತನ್ನ ಮಗುವನ್ನು ಚಾಕುವಿನಿಂದ ಇರಿದು ಕೊಲೆ(Murder)ಮಾಡಿ, ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಎರಡು ವರ್ಷ 9 ತಿಂಗಳಿನ ಸಾತ್ವಿಕ್ ರಾಹುಲ್ ಕಟಗೇರಿ ಕೊಲೆಯಾದ ಮಗು(Baby)ಎಂದು ಗುರುತಿಸಲಾಗಿದೆ. ತಾಯಿ(Mother)ಭಾಗ್ಯಶ್ರೀ ಕೊಲೆ ಆರೋಪಿ(Accused)ಯಾಗಿದ್ದು, ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಆಗಿರಬಹುದು ಎಂದು ಕಾಗವಾಡ ಠಾಣೆಯ ಪೊಲೀಸರು (Police)ತಿಳಿಸಿದ್ದಾರೆ.
ಏಳು ವರ್ಷಗಳ ಹಿಂದೆ ಮದುವೆಯಾದ ರಾಹುಲ್ ಮಾರುತಿ ಕಟಗೇರಿ ಮತ್ತು ಭಾಗ್ಯಶ್ರೀ ದಂಪತಿ, ಫರೀದಖಾನ ವಾಡಿಯ ತೋಟದ ಮನೆಯಲ್ಲಿ ವಾಸವಿದ್ದರು. ಪ್ರಾಣಾಪಾಯದಿಂದ ಪಾರಾದ ತಾಯಿಯನ್ನು ಬಂಧಿಸಲಾಗಿದೆ. ಮಗವಿನ ತಂದೆ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.