Home ಕಾನೂನು ಹಳೆ ಹುಡುಗಿ ಕೆಮ್ಮಿದರೆ ಪ್ರಳಯನೇ ಗ್ಯಾರಂಟಿ! ಹೊಸ ಹುಡುಗಿ ಜೊತೆ ಹಳೆ ಹುಡುಗ; ಮಾಜಿ ಲವರ್ ಮೇಲೆ ಫೈರ್!

ಹಳೆ ಹುಡುಗಿ ಕೆಮ್ಮಿದರೆ ಪ್ರಳಯನೇ ಗ್ಯಾರಂಟಿ! ಹೊಸ ಹುಡುಗಿ ಜೊತೆ ಹಳೆ ಹುಡುಗ; ಮಾಜಿ ಲವರ್ ಮೇಲೆ ಫೈರ್!

0
ಹಳೆ ಹುಡುಗಿ ಕೆಮ್ಮಿದರೆ ಪ್ರಳಯನೇ ಗ್ಯಾರಂಟಿ! ಹೊಸ ಹುಡುಗಿ ಜೊತೆ ಹಳೆ ಹುಡುಗ; ಮಾಜಿ ಲವರ್ ಮೇಲೆ ಫೈರ್!

ಬೆಳಗಾವಿ, ನವೆಂಬರ್ 28: ಬೆಳಗಾವಿಯ ಮಹಾಂತೇಶ ನಗರದಲ್ಲಿ 31 ವರ್ಷದ ಯುವಕನ ಮೇಲೆ ಬುಧವಾರ ರಾತ್ರಿ ಗುಂಡಿನ ದಾಳೆ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬುಧವಾರ ರಾತ್ರಿ 8.30ರ ಸುಮಾರಿಗೆ ಪ್ರಣೀತ್ ಕುಮಾರ್ ಎಂಬ ಯುವಕ ತನ್ನ ಸ್ನೇಹಿತೆಯ ಮನೆಗೆ ರಾತ್ರಿಯ ಊಟಕ್ಕೆ ಹೋಗಿದ್ದಾಗ ತನ್ನ ಹಳೆಯ ಪ್ರೇಮದ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ.

ಆಗ ಸ್ನೇಹಿತೆ ಮಹಿಳೆಗೆ ಫೋನ್ ಮಾಡಿ ತನ್ನ ಮನೆಗೆ ಬರುವಂತೆ ಹೇಳುತ್ತಾಳೆ. ಸ್ಥಳಕ್ಕೆ ಬಂದ ಆತನ ಹಳೆಯ ಪ್ರಿಯತಮೆ ಮತ್ತು ಆಕೆಯ ಸಹೋದರ ಹಾಗೂ ಸಂಬಂಧಿಕರು ತಗಾದೆ ತೆಗೆದಿದ್ದಾರೆ.

ಆ ಬಳಿಕ ಗುಂಡಿನ ದಾಳಿ ನಡೆದಿದೆ ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ತಿಳಿಸಿದ್ದಾರೆ.

ಮಹಿಳೆಯ ಸಂಬಂಧಿಕರೊಬ್ಬರು ಪಿಸ್ತೂಲ್‌ನಿಂದ ಎರಡು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ಪ್ರಣೀತ್ ಕಿವಿಗೆ ತಾಗಿದ್ದರೆ, ಮತ್ತೊಂದು ಕಾಲಿಗೆ ತಗುಲಿದೆ ಎಂದು ಅವರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈ ಸಂಬಂಧ ಯುವತಿ, ಆಕೆಯ ಸಹೋದರಿ, ಸಹೋದರ ಸೇರಿದಂತೆ ಮೂವರನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here