ಪ್ರಯಾಗ್‌ರಾಜ್, ಜನವರಿ 16: ದೇಶದೆಲ್ಲೆಡೆ ಸದ್ಯ ಮಹಾಕುಂಭ (Mahakumbh Mela 2025) ಮೇಳದ್ದೇ ಸದ್ದು. ಮಹಾಕುಂಭದ ಮೊದಲ 2 ದಿನಗಳಲ್ಲಿ 5 ಕೋಟಿಗೂ ಹೆಚ್ಚು ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ದೇಶ, ವಿದೇಶಗಳ ಭಕ್ತರೂ ಇದರಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.ಈ ಮಹಾಕುಂಭಕ್ಕೆ ಆಗಮಿಸಿರುವ ಗ್ಲಾಮರಸ್ ಸಾಧ್ವಿ, ಭೋಪಾಲ್‌ನ ಹರ್ಷಾ ರಿಚರಿಯಾ (Harsha Richhariya) ಸದ್ಯ ಟ್ರೆಂಡ್ ಆಗ್ತಿದ್ದಾರೆ.
ತಮ್ಮ ಸೌಂದರ್ಯದಿಂದಲೇ ಗಮನ ಸೆಳೆಯುತ್ತಿರೋ ಹರ್ಷಾ ರಿಚಾರಿಯಾ ಹುಡುಗರ ದಿಲ್ ಕದ್ದಿದ್ದಾರೆ.ಹೌದು.. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭೋಪಾಲ್‌ನ ಹರ್ಷಾ ರಿಚರಿಯಾ ಅವರನ್ನು ಅತ್ಯಂತ ಸುಂದರವಾದ ಸಾಧ್ವಿ ಎಂದು ಕರೆಯಲಾಗುತ್ತಿದೆ. ಸಾಧ್ವಿ ಹರ್ಷಾ ರಿಚರಿಯಾ ಹಿಂದೆ ಹುಡುಗರು ಓಡಾಡುತ್ತಿದ್ದಾರೆ.

ಇಷ್ಟು ಚಿಕ್ಕ ವಯಸ್ಸಿಗೆ ಅಷ್ಟೊಂದು ಸುಂದರವಾದ ಯುವತಿ ಸಾಧ್ವಿ ಆಗಿದ್ದು ಹೇಗೆ? ಅನ್ನೋದರ ಬಗ್ಗೆ ಅನೇಕರಲ್ಲಿ ಪ್ರಶ್ನೆ ಓಡಾಡುತ್ತಿದೆ. ಈತನ್ಮಧ್ಯೆ ಸಾಧ್ವಿ ಹರ್ಷಾ ರಿಚರಿಯಾ ಅವರು ತಮ್ಮ ಮದುವೆಯ ಬಗ್ಗೆಯೂ ಮಾಹಿತಿ ಬಹಿರಂಗಪಡಿಸಿದ್ದಾರೆ.

“ಸಾಧ್ವಿಯ ನಿಜವಾದ ಅರ್ಥ ಎಂದಿಗೂ ಮದುವೆಯಾಗದ ವ್ಯಕ್ತಿ. ನಾನು ಇನ್ನೂ ಮದುವೆಯಾಗುವ ಬಗ್ಗೆ ಯೋಚಿಸಿಲ್ಲ. ನಾನು ಎಂದಿಗೂ ಮದುವೆಯಾಗುವುದಿಲ್ಲ ಎಂದು ಅಲ್ಲ. ನಾನು ಪ್ರಸ್ತುತ ನನ್ನ ಕೆಲಸದಲ್ಲಿ ನಿರತಳಾಗಿದ್ದೇನೆ. ಮದುವೆಯ ವಿಷಯವನ್ನು ಬಿಟ್ಟು ನಾನು ಕೆಲಸ ಮಾಡುತ್ತಿದ್ದೇನೆ. ಗುರುದೇವನ ಆಶ್ರಯದಲ್ಲಿ ನಾನು ಈಗ ಭಕ್ತಿಯನ್ನು ಅನುಭವಿಸುತ್ತಿದ್ದೇನೆ. ನಾನು ಶಾಂತಿಯನ್ನು ಸಾಧ್ವಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಆದರೂ ಆಕೆ ಸಾಧ್ವಿ ಆಗಿದ್ದಾರೆ. ಇದಕ್ಕೂ ಮುನ್ನ ಮಾಡೆಲಿಂಗ್ ಮತ್ತು ಆಂಕರಿಂಗ್ ಲೋಕದಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ರಿಚಾರಿಯಾ, ವಿವಿಧ ವಾಹಿನಿಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಹರ್ಷಾ ರಿಚರಿಯಾ ಅವರು, ಪ್ರಸ್ತುತ ನಾನು ಮದುವೆಯ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದ್ದಾರೆ. ಹರ್ಷ ರಿಚಾರಿಯ ಪ್ರಕಾರ, ಅವರು ಸಾಧ್ವಿಯಾಗುವ ಮೂಲಕ ಸನಾತನ ಧರ್ಮವನ್ನು ನಿರಂತರವಾಗಿ ಪ್ರಚಾರ ಮಾಡುವ ಕೆಲಸದಲ್ಲಿ ತೊಡಗುತ್ತಾರಂತೆ. ಶಾಂತಿಗಾಗಿ ಸಾಧ್ವಿಯಾಗುವ ನಿರ್ಧಾರ ಕೈಗೊಂಡಿದ್ದಾರಂತೆ.