
‘ಸುವರ್ಣ ಸಮಾಚಾರ’ ನೇರ ನೈಜ ನಿಷ್ಪಕ್ಷಪಾತ ಅಪ್ಪಟ ಕನ್ನಡದ ಸುದ್ದಿ ವಾಹಿನಿಯ ಅಧೀಕೃತ ಕಚೇರಿಯನ್ನು ಇಂದು ಇಟಗಿ ಕ್ರಾಸ್ ನಲ್ಲಿ ಉದ್ಘಾಟಿಸಲಾಯಿತು.
ಬೆಳಗಾವಿ, ಅಕ್ಟೋಬರ್ 03: ವೆಬ್ ಸೈಟ್, (Website) ಯುಟ್ಯೂಬ್, (YouTube), ಫೇಸ್ ಬುಕ್ ( Facebook) ಹೀಗೆ ಮುಂದುವರಿದ ತಾಂತ್ರಜ್ಞಾನ ಬಳಸಿಕೊಂಡು ಜನಸಾಮಾನ್ಯರ ಬೆರಳ ತುದಿಗೆ ನಿಜವಾದ ನಿಷ್ಪಕ್ಷಪಾತವಾದ ಸುದ್ದಿಗಳನ್ನು ತಲುಪಿಸುವ ಪ್ರಯತ್ನ ಮಾಡಬೇಕಿದೆ. ಆ ನಿಟ್ಟಿನಲ್ಲಿ ‘ಸುವರ್ಣ ಸಮಾಚಾರ’ ಡಿಜಿಟಲ್ ಸುದ್ದಿ ವಾಹಿನಿ ಸಕ್ರಿಯವಾಗಿರಲಿದೆ.
ಈವತ್ತು ಕಛೇರಿ ಉದ್ಘಾಟಿಸಿದ ‘ಸುವರ್ಣ ಸಮಾಚಾರ’ದ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಉಪಸ್ಥಿತರಿದ್ದ ಎಲ್ಲ ಸಮಾನ ಮನಸ್ಕ ಗೆಳೆಯರು ಶುಭ ಹಾರೈಸಿದರು.
ಇನ್ನು ಅಕ್ಟೋಬರ್ 02 ಗಾಂಧಿ ಜಯಂತಿ ಪ್ರಯುಕ್ತ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವಸಂತಗಳು ತುಂಬಿದ ಪ್ರಯುಕ್ತ ಗಾಂಧೀಜಿಯವರ ವಿಶೇಷ ದೃಶ್ಯ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ಇತಿಹಾಸ ವಿಶ್ಲೇಷಕರಾಗಿರುವ ಮಹೇಶ ಚನ್ನಂಗಿ ಬೆಳಗಾವಿ ಮತ್ತು ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧೀಜಿಯವರ ನಂಟು ಕೊಡುಗೆ, ಆ ಕಾಲಘಟ್ಟದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸವಿಸ್ತಾರವಾಗಿ ವಿಶ್ಲೇಷಣೆ ಮಾಡಿದ ವಿಡಿಯೋವನ್ನು ಸುವರ್ಣ ಸಮಾಚಾರ ವಾಹಿನಿಯ ಯೂಟ್ಯೂಬ್ ನಲ್ಲಿ ಪ್ರದರ್ಶಿಸಲಾಯಿತು.