
ಬೆಂಗಳೂರು, ನವೆಂಬರ್ 03: ನಾನು ಸತ್ತರೂ ನಿಮಗೆ ಈ ಶಾಪ ತಟ್ಟಬೇಕು ಎಂದು ಹೇಳುತ್ತಾ ಕೋವಿಡ್ ಸಂದರ್ಭದಲ್ಲಿ ಗುರುಪ್ರಸಾದ್ ಅವರು ವಿಡಿಯೋ ಮಾಡಿದ್ದರು. ಅವರು ಮೃತರಾದ ಈ ಸಂದರ್ಭದಲ್ಲಿ ಮತ್ತೆ ಆ ವಿಡಿಯೋ ವೈರಲ್ ಆಗುತ್ತಿದೆ.
ಡೈರೆಕ್ಟರ್ ಗುರುಪ್ರಸಾದ್ ಅವರಿಗೆ ಕೋವಿಡ್ ಪಾಸಿಟಿವ್ ಬಂದಿರುವಾಗ ರಾಜಕಾರಣಿಗಳಿಗೆ ಬೈದ ವಿಡಿಯೋದಲ್ಲಿ ಏನಿದೆ ನೋಡಿ. ಅಕಸ್ಮಾತ್ ನಾನು ತೀರಿ ಹೋದ್ರೆ ಹೇಳೋಕಾಗಲ್ಲ ಆ ಕಾರಣಕ್ಕಾಗಿ ಈಗಲೇ ವಿಡಿಯೋ ಮಾಡ್ತಾ ಇದೀನಿ ಎಂದು ಹೇಳುತ್ತಾ ರಾಜಕೀಯ ವ್ಯಕ್ತಿಗಳಿಗೆ ಛೀಮಾರಿ ಹಾಕಿ ವಿಡಿಯೋ ಮಾಡಿದ್ದರು.
ನಾನು ನಿಮ್ಮ ಕುರಿತು ಈ ವಿಡಿಯೋ ಮಾಡಿದ್ದಕ್ಕೆ ನಾನು ಅಪ್ರಾಮಾಣಿಕನಾಗಿ ಯಾರ್ಯಾರಿಗೆ ಮೋಸ ಮಾಡಿದ್ದೀನಿ ಎಂಬುದನ್ನೆಲ್ಲ ಈಗ ಹುಡುಕಾಡ್ತೀರಾ, ಹುಡುಕಿಕೊಳ್ಳಿ ಎಂದಿದ್ದರು. ನಮ್ಮ ಸಾಲ ತೀರಿಸೋಕೆ, ನಮ್ಮ ಕರ್ತವ್ಯ ನಿಭಾಯಿಸೋದಕ್ಕೆ ಶ್ರಮದಿಂದ ದುಡಿಯೋ ನಮಗೆ ನೀವು ಈ ರೀತಿ ಮಾಡ್ತಾ ಇದ್ದೀರಾ. ನಿಮಗೆ ನೀವು ಕೋಟಿ ಮಾಡುವುದೇ ಮುಖ್ಯ ಅಲ್ವ? ಎಂದು ಹೇಳಿದ್ದರು.
ನನಗೆ ಕರೋನಾ ತಂದು ಕೊಟ್ಟದ್ದಕ್ಕೆ ನಿಮಗೆಲ್ಲ ಶಾಪ ಇದೆ ಎಂದಿದ್ದರು.ಒಬ್ಬ ಸತ್ರು ನಾನು ಜವಾಬ್ಧಾರಿ ಎನ್ನುವುದು ಮೋದಿ ಆದರೆ ಆ ಮೋದಿಯಿಂದ ನೀವು ಪಾಠ ಕಲಿಯಲಿಲ್ಲ ಎಂದಿದ್ದರು. ಸಿನಿಮಾ ಇಂಡಸ್ಟ್ರಿಯವರನ್ನೆಲ್ಲ ನೀವು ಸಾಯ್ಸತೀರಾ ಎಂದು ಹೇಳಿದ್ದರು. ಯಡಿಯೂರಪ್ಪ, ವಿಜಯೇಂದ್ರ, ಡಿ.ಕೆ ಶಿ ಇವರೆಲ್ಲರಿಗೂ ಹೆಸರು ಹೇಳಿ ಬೈದಿದ್ದರು. ನಾನು ಸಾಯೋ ಮುಂಚೆ ನಿಮಗೆ ಇದನ್ನೆಲ್ಲ ಹೇಳಿ ಬಿಡ್ತೀನಿ ಎಂದು ಕೂಗುತ್ತಾ ಹೇಳಿದ್ದರು. ಬದುಕಿನ ಮೇಲೆ ತುಂಬಾ ಆಸೆ ಇರುವ ರೀತಿಯಲ್ಲಿ ಅವರು ಅಂದು ಮಾತನಾಡಿದ್ದರು.