ಬೆಂಗಳೂರು: ೧೩ ನವಂಬರ್: ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಸಿಎಎಂಎಸ್) ವರದಿ ಪ್ರಕಾರ, 2022ರ ಜೂನ್ ನಿಂದ – 2023ರ ಜುಲೈ ನಡುವೆ 6 ರಿಂದ 10 ವರ್ಷದವರೆಗಿನ ಮಕ್ಕಳು ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆಯುವುದರಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. 1 ರಿಂದ 5 ನೇ ತರಗತಿವರೆಗೆ ಶೇ.97.4ರಷ್ಟು ಮಕ್ಕಳು ದಾಖಲಾಗಿದ್ದಾರೆ.
ಕರ್ನಾಟಕದಲ್ಲಿ ಶೇ.64.4 ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಿದ್ದರೆ, ಶೇ.10.1 ರಷ್ಟು ಮಕ್ಕಳು ಅನುದಾನಿತ, ಶೇ.25.5 ರಷ್ಟು ಮಕ್ಕಳು ಖಾಸಗಿ ಹಾಗೂ ಶೇ. 0.3 ರಷ್ಟು ಇತರೆ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ.