spot_img
Thursday, April 17, 2025
spot_imgspot_imgspot_imgspot_img
spot_img

Top 5 This Week

spot_img

Related Posts

ಸಮಾಜದ ಉತ್ತಮ ಭವಿಷ್ಯಕ್ಕಾಗಿ ಶರಣ ಸಂಸ್ಕೃತಿ ಶಿಬಿರಗಳು ಅವಶ್ಯಕವಾಗಿವೆ: ಡಾ.ಅವಿನಾಶ ಕವಿ

ಬೈಲೂರು, ಅಕ್ಟೋಬರ್ 06: ಗ್ರಾಮದ ನಿಷ್ಕಲ ಮಂಟಪದಲ್ಲಿ ಆಯೋಜಿಸಲಾದ ‘ಶರಣ ಸಂಸ್ಕೃತಿ ಶಿಬಿರ’ ಸಮಾಜದ ಉತ್ತಮ ಭವಿಷ್ಯಕ್ಕೆ ನಾಂದಿಯಾಗಿದೆ ಇದರಿಂದ ಮಕ್ಕಳಲ್ಲಿ ವೈಜ್ಞಾನಿಕ, ವೈಚಾರಿಕತೆಯ ಮನೋಭಾವಗಳ ಜೊತೆಗೆ ಏಕದೇವೋಪಾಸನೆಯ ಅರಿವು ಮೂಡಿ ಬಸವಣ್ಣನವರ ಸದಾಶಯದ ‘ಲಿಂಗಾಯತ ಧರ್ಮ’ ದ ಉಳಿವಿಗೆ ಪೂರಕವಾಗಲಿದೆ ಎಂದು ಕೆ.ಎಲ್.ಇ ಸಂಸ್ಥೆಯ ಜೆ.ಎನ್.ಎಮ್.ಸಿ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಅವಿನಾಶ ಕವಿ ಅಭಿಪ್ರಾಯ ಪಟ್ಟರು.

ಬೈಲೂರು ನಿಷ್ಕಲ ಮಂಟಪದ ಚೆನ್ನಬಸವಣ್ಣನವರ ಸಭಾ ಭವನದಲ್ಲಿ ಪೂಜ್ಯ ನಿಜಗುಣಾನಂದ ಶ್ರೀಗಳ ಸಾನಿಧ್ಯದಲ್ಲಿ ಹಮ್ಮಿಕೊಂಡ ಶರಣ ಸಂಸ್ಕ್ರತಿ ಶಿಬಿರದ ಅತಿಥಿಯಾಗಿ ‘ಶಿವಯೋಗದಲ್ಲಿ ವೈಜ್ಞಾನಿಕತೆ’ ಕುರಿತಾಗಿ ವಿಡಿಯೋ ಸಂವಾದದ ಮೂಲಕ ಮಾತನಾಡಿದ ಅವರು‌ ಲಿಂಗಾಯತ ಧರ್ಮದ ಮೂರು ಮುಖ್ಯ ತತ್ವಗಳಾದ ಅಷ್ಟಾವರಣ, ಪಂಚಾಚಾರ, ಷಟಸ್ಥಲಗಳು, ಬಸವಣ್ಣ ಮತ್ತವರ ಸಮಕಾಲೀನ ಶರಣರ ದೈನಂದಿನ ಜೀವನದ ಕುರಿತಾದ ವಚನಗಳನ್ನು ಉಲ್ಲೇಖಿಸಿ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಬಗ್ಗೆ ಮಾತನಾಡಿದರು.

ವಿಶ್ವ ಅರೋಗ್ಯ ಸಂಸ್ಥೆಯು ಆರೋಗ್ಯ ಎಂದರೆ ಒಬ್ಬ ವ್ಯಕ್ತಿಯ ಸಂಪೂರ್ಣ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಮತೋಲನ ಸ್ಥಿತಿಯಾಗಿದೆ ಎಂದು ತಿಳಿಸಿದ್ದು ಅದು ಚೆನ್ನಬಸವಣ್ಣನವರ ‘ಕರಣ ಹಸಿಗೆ’ ಎಂಬ ವಚನದಲ್ಲಿರುವುದನ್ನು ಉಲ್ಲೇಖಿಸಿದರು.

ಮನುಷ್ಯನ ಆಹಾರ, ನಿದ್ರೆ ಮತ್ತು ಮಾತು ಮಿತವಾಗಿರಲಿ ಎಂದು ವಚನಗಳಲ್ಲಿ ದಾಖಲಾಗಿದೆ ಎಂದರು.ಇಷ್ಟಲಿಂಗ ಕೇವಲ ಲಿಂಗಾಯತ ಧರ್ಮದ ಲಾಂಛನವಾಗಿ, ಪೂಜೆಗೆ ಸೀಮಿತವಾಗದೇ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ಆಧ್ಯಾತ್ಮಿಕ ಹಾಗೂ ತತ್ವಜ್ಞಾನದ ಕುರಿತಾಗಿಯೂ ಸಮಗ್ರ ಮಾರ್ಗದರ್ಶಿಯಾಗಿದೆ. ಆದ್ದರಿಂದ ಮಕ್ಕಳಿಗೆ ಇಷ್ಟಲಿಂಗ ಸಂಸ್ಕಾರ ಅವಶ್ಯಕ ಎಂದರು.

ಪೂಜ್ಯ ನಿಜಗುಣಾನಂದ ಶ್ರೀಗಳು ಸಾನಿಧ್ಯ ವಹಿಸಿದ್ದರು. ಬಸವ ಧರ್ಮಪೀಠದ ಬಸವ ದೇವರು, ಶಿಕ್ಷಕ ಮಹಾಂತೇಶ ತೋರಣಗಟ್ಟಿ, ಬಸವರಾಜ ಲದ್ದಿಮಠ, ರುದ್ರಪ್ಪ ಇಟಗಿ, ರವಿ ಪಾಟೀಲ, ಶಂಕ್ರಣ್ಣಾ ಪತ್ತಾರ, ಸಂಗಮೇಶ ಹಿರೇಮಠ, ನಾಗೇಶ ಬೆಣ್ಣಿ, ಶಿವಾನಂದ ಮೆಟ್ಯಾಲ, ಫಕ್ಕೀರಗೌಡ ಹಾದಿಮನಿ, ರವಿ ಮಡಿವಾಳರ, ಚನ್ನಪಗೌಡ ಪಾಟೀಲ, ಸಂಜು ಕೊಟಗಿ, ಗದಿಗೆಪ್ಪ ರುಮೋಜಿ, ನವೀನ ಪುರಕಿ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.ಶರಣ ನಾಗರಾಜ ಹಿರೇಮಠ ಸ್ವಾಗತಿಸಿದರು, ನಾಗೇಶ ಅಜ್ಜವಾಡಿಮಠ ನಿರೂಪಿಸಿದರು ಶರಣು ಇಳಿಗೇರ ವಂದಿಸಿದರು.

कोई जवाब दें

कृपया अपनी टिप्पणी दर्ज करें!
कृपया अपना नाम यहाँ दर्ज करें

Popular Articles