Home ವಿಶೇಷ ಸಮಯ ನ್ಯೂಸ್‌, ಸಾಮ್ರಾಟ ಟಿವಿ ಮತ್ತು ಪೋಲೀಸ್ ಕಲ್ಯಾಣ ಅಭಿವೃದ್ಧಿ ಸಂಘದ ಸಮಾಜಮುಖಿ ಸೇವೆ ಶ್ಲಾಘನೀಯ: ಡಾ. ಸೋನಾಲಿ ಸರ್ನೋಬತ್ತ

ಸಮಯ ನ್ಯೂಸ್‌, ಸಾಮ್ರಾಟ ಟಿವಿ ಮತ್ತು ಪೋಲೀಸ್ ಕಲ್ಯಾಣ ಅಭಿವೃದ್ಧಿ ಸಂಘದ ಸಮಾಜಮುಖಿ ಸೇವೆ ಶ್ಲಾಘನೀಯ: ಡಾ. ಸೋನಾಲಿ ಸರ್ನೋಬತ್ತ

0

ಸಮಯ ನ್ಯೂಸ್‌ ಮತ್ತು ಸಾಮ್ರಾಟ ಟಿವಿ ನೂತನ ಕಚೇರಿ ಉದ್ಘಾಟನಾ ಹಾಗೂ ʻʻಸಾಮ್ರಾಟ್ ಟಿವಿ ಯುವರತ್ನʻʻ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಉದ್ಘಾಟನೆ ಜರುಗಿತು

ಬೆಳಗಾವಿ: ಪೋಲೀಸ್ ಕಲ್ಯಾಣ ಅಭಿವೃದ್ಧಿ ಸಂಘ ತಮ್ಮ ಅನನ್ಯ ಸೇವಾ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಪ್ರಭಾವ ಬೀರುತ್ತಿದ್ದು, ಸಂಘಗಳನ್ನು ಸ್ಥಾಪಿಸುವುದು ಮುಖ್ಯವಲ್ಲ, ಅದನ್ನು ನಿರಂತರವಾಗಿ ಸಮರ್ಥವಾಗಿ ನಡೆಸಿಕೊಳ್ಳುವುದು ದೊಡ್ಡ ಸಾಧನೆ ಎಂದು ಬಿಜೆಪಿ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್ತ ಹೇಳಿದರು.

ಸಾಮ್ರಾಟ್ ಟಿವಿ, ಸಮಯ ನ್ಯೂಸ್, ಕೆಬಿಎ ನ್ಯೂಸ್, ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ, ಎಸಿಎಫ್ ಹಾಗೂ ಜೈ ಭೀಮ ಸೇನೆ ಇವುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ನಡೆದ ಸಮಯ ನ್ಯೂಸ್‌ ಮತ್ತು ಸಾಮ್ರಾಟ ಟಿವಿ ನೂತನ ಕಚೇರಿ ಉದ್ಘಾಟನಾ ಹಾಗೂ ʻʻಸಾಮ್ರಾಟ್ ಟಿವಿ ಯುವರತ್ನʻʻ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಪೊಲೀಸರು ಸದಾ ಜನರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ, ಕೆಲವು ಸಂದರ್ಭಗಳಲ್ಲಿ ಅವರ ಮೇಲೆ ದೌರ್ಜನ್ಯಗಳು ನಡೆಯುತ್ತವೆ ಅಂತಹ ಸಂದರ್ಭಗಳಲ್ಲಿ ಅವರಿಗೆ ನ್ಯಾಯ ಒದಗಿಸುವ ಮಹತ್ತರ ಕೆಲಸವನ್ನು ಈ ಸಂಘ ಮಾಡುತ್ತಿದೆ,” ಎಂದು ಪ್ರತಿಪಾದಿಸಿದರು.

ಪೋಲೀಸರು ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಸಂಘದ ಕಾರ್ಯ:

ಪೋಲೀಸರು ಹಾಗೂ ಸಾರ್ವಜನಿಕರ ನಡುವೆ ಉತ್ತಮ ಸಂವಹನ, ನ್ಯಾಯದ ಹೋರಾಟ, ಹಾಗೂ ಅವರ ಹಿತ ಕಾಯುವ ಉದ್ದೇಶದಿಂದ ಈ ಸಂಘ ಶ್ರಮಿಸುತ್ತಿದೆ. ಕಾನೂನಿನಡಿ ಪೊಲೀಸರ ಹಕ್ಕುಗಳ ಪರಿಪಾಲನೆ, ಅವರ ಕುಟುಂಬಗಳ ಕಲ್ಯಾಣದ ಹಿತದೃಷ್ಠಿಯಲ್ಲಿ ಪೊಲೀಸ ಕುಟುಂಬಗಳಿಗೆ ಸಹಾಯ ಮಾಡುವುದು ಈ ಸಂಘದ ಪ್ರಮುಖ ಉದ್ದೇಶವಾಗಿದ್ದು ಸಂಘದ ಈ ಸೇವೆ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದು, ಭವಿಷ್ಯದಲ್ಲಿ ಇನ್ನಷ್ಟು ಜನಸೇವೆಗೊಂದು ಅನುವಾಗುವಂತೆ ಇದನ್ನು ವಿಸ್ತರಿಸಬೇಕು ಎಂಬ ಆಶಯವನ್ನು ಡಾ. ಸೋನಾಲಿ ಸರ್ನೋಬತ್ತ ವ್ಯಕ್ತಪಡಿಸಿದರು.

ಹಾರುಗೇರಿ ಶರದಿ ನೃತ್ಯ ಅಕ್ಯಾಡಮಿ ಮಕ್ಕಳ ಭರತನಾಟ್ಯ

ಪೋಲೀಸ್ ಕಲ್ಯಾಣ ಅಭಿವೃದ್ಧಿ ಸಂಘದ ರಾಜ್ಯ ಸಂಚಾಲಕ ಸೋಮಶೇಖರಗೌಡ ಮಾತನಾಡಿ ಪೊಲೀಸ್ ಅಧಿಕಾರಿಗಳ ಹಿತ ಕಾಯುವ ಉದ್ದೇಶದಿಂದ ಸ್ಥಾಪಿತಗೊಂಡ ಪೋಲೀಸ್ ಕಲ್ಯಾಣ ಅಭಿವೃದ್ಧಿ ಸಂಘ ಈಗ ಯಶಸ್ವಿಯಾಗಿ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಜನಸೇವೆಯ ಪ್ರಾಮಾಣಿಕ ಉದ್ದೇಶದಿಂದ ಪ್ರಾರಂಭವಾದ ಈ ಸಂಘ, ಈಗ ಪೊಲೀಸರ ಹಕ್ಕುಗಳ ರಕ್ಷಣೆ, ಕಾನೂನು ಪರಿಷ್ಕರಣೆ ಮತ್ತು ಸಾರ್ವಜನಿಕ ಸಮಸ್ಯೆಗಳ ಪರಿಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ,” ಸಂಸ್ಥೆಯ ಶ್ರೇಯಸ್ಸಿಗೆ ಸಮಯ ಮತ್ತು ಸಾಮ್ರಾಟ ಟಿವಿ ಸಂಸ್ಥಾಪಕರಾದ ಕೆ. ರಾಜನ್ ಮತ್ತು ಪೋಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ. ಬಿ.ಎಚ್. ಜಮಾದಾರ ಅವರು ನೀಡಿರುವ ಮಾರ್ಗದರ್ಶನದ ಮಹತ್ವವನ್ನು ಅವರು ಒತ್ತಿಹೇಳಿದರು.


ಕಾರ್ಯಕ್ರಮದ ಸಾನಿದ್ಯ ವಹಿಸಿ ಹುನಶಿಕಟ್ಟಿ ರುದ್ರಸ್ವಾಮಿ ಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು ಮಾತನಾಡಿ, “ಸಾರ್ವಜನಿಕರ ಸಮಸ್ಯೆಗಳನ್ನು  ತಮ್ಮದೇ ಸಮಸ್ಯೆಯಂತೆ ಅರಿತು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಕಚೇರಿ ತೆರೆಯುವ ಮೂಲಕ ಡಾ. ಬಿ.ಎಚ್. ಜಮಾದಾರ ಅವರು ಮಹತ್ತರ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಯುವ ಮುಖಂಡ ಪಿ.ಕೆ. ನಿರಲಕಟ್ಟಿ ಮಾತನಾಡಿ ಸಂಘವನ್ನು ಕಟ್ಟುವುದು ದೊಡ್ಡ ವಿಷಯವಲ್ಲ. ಆದರೆ ಅದು ಸಮಾಜದ ನೈತಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಕೆಲಸ ಮಾಡಿದಾಗ ಮಾತ್ರ ಅದರ ಸಾರ್ಥಕತೆ ಇದೆ. ಭ್ರಷ್ಟಾಚಾರವನ್ನು ಎದುರಿಸಲು ಈ ಸಂಘ ಸಮರ್ಥವಾಗಿ ಕೆಲಸ ಮಾಡಲಿ ಜೊತೆಗೆ  ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಿದರೆ, ನಾನೂ ಸಹ ಈ ಕಾರ್ಯದಲ್ಲಿ ಸಂಪೂರ್ಣವಾಗಿ ತನು ಮನ ಧನದಿಂದ ಸಹಾಯ ಸಹಕಾರ  ನೀಡಲು ಸಿದ್ಧ ಎಂದು ತಿಳಿಸಿದರು.

ಚನ್ನಮ್ಮನ ಕಿತ್ತೂರು ತಾಲೂಕಾ ಎಸಿಎಫ್ ಸಂಘಟನೆಯ ಗೌರವ ಅಧ್ಯಕ್ಷ ಅಬ್ದುಲ್ಲ ಮುಲ್ಲಾ ಮಾತನಾಡಿ “ನಮ್ಮ ಸಂಘದ ಅಧ್ಯಕ್ಷ  ಡಾ ಬಿ ಎಚ್  ಜಮಾದಾರ ಅವರಂತಹ ನಾಯಕರು ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ದೇಶಕ್ಕೆ ರೈತರು ಬೆನ್ನೆಲುಬಾಗಿ ನಿಂತಂತೆ ನಮ್ಮ ಅಧ್ಯಕ್ಷರ ಬೆನ್ನೆಲುಬಾಗಿ ನಾವು ಸದಾ ನಿಲ್ಲುತ್ತೇವೆ  ಎಂದರು.

ಖ್ಯಾತ ಪ್ರವಚನಕಾರ ಹಜರತ್ ತನ್ವೀರಸಾಬ ಮುಜಾವರ ಮಾತನಾಡಿ  “ಬೇಧಭಾವವಿಲ್ಲದೆ ಸಾವಿರಾರು ಜನರನ್ನು ಒಗ್ಗೂಡಿಸಿ, ಸಮಾನತೆಯ ಸಂದೇಶ ಹರಡುತ್ತಾ ಈ ಸಂಘ ಕಾರ್ಯನಿರ್ವಹಿಸುತ್ತಿದೆ. ವಿಶ್ವಗುರು ಬಸವಣ್ಣನವರ ವಚನದಂತೆ ‘ಇವನಾರವ, ಇವನಾರವ ಇವನಾರವ  ಎನ್ನದೆ – ಇವ ನಮ್ಮವ, ಇವ ನಮ್ಮವ ನಮ್ಮ ಮನೆಯ ಮಗನೆಂದಣಸಯ್ಯಾ ಎಂಬ ನಾನ್ನುಡಿಯಂತೆ, ಎಲ್ಲರನ್ನೂ ಸಮಾನತೆಯಿಂದ ಒಗ್ಗೂಡಿಸಿ ಕೆಲಸ ಮಾಡುವುದು ಶ್ಲಾಘನೀಯ,” ಎಂದು ಪ್ರಶಂಸಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಮೆಚ್ಚುಗೆ:

ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದ ಜ್ಯೂನಿಯರ್ ರವಿಚಂದ್ರನ್ ಅವರ ನಾಟ್ಯ ಪ್ರದರ್ಶನ ಮತ್ತು ಹಾರುಗೇರಿ ಶರದಿ ನೃತ್ಯ ಅಕ್ಯಾಡಮಿ ಮಕ್ಕಳ ಭರತನಾಟ್ಯ ಪ್ರೇಕ್ಷಕರ ಮೆಚ್ಚುಗೆ ಪಡೆದವು, ಕಲೆಯ ಮಹತ್ವ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಸಾಮಾಜಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂಬ ದೃಷ್ಟಿಕೋನವನ್ನು ಈ ಪ್ರದರ್ಶನಗಳು ಮೂಡಿಸಿದವು.

ಸಂಸ್ಥೆಯ ಮುಂದಿನ ಪ್ಲಾನ್:

ಈ ಸಂದರ್ಭದಲ್ಲಿ ಪೋಲೀಸ್ ಕಲ್ಯಾಣ ಅಭಿವೃದ್ಧಿ ಸಂಘ ಮುಂಬರುವ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿತು. ಸಮಾನತೆ, ನ್ಯಾಯ ಮತ್ತು ಪೊಲೀಸ್ ಹಕ್ಕುಗಳ ರಕ್ಷಣೆಗಾಗಿ ಹೊಸ ಕಾರ್ಯತಂತ್ರಗಳನ್ನು ರೂಪಿಸಲಾಗುವುದು. ಈ ಸಂಘವು ಪೊಲೀಸರ ಮಕ್ಕಳ ಶಿಕ್ಷಣ, ಅವರ ಕುಟುಂಬದ ಕಲ್ಯಾಣದ ಹಿತದೃಷ್ಠಿಯಿಂದ  ಹಲವಾರು ಕಾರ್ಯಕ್ರಮಗಳನ್ನು ಆರಂಭಿಸಲು ಯೋಜನೆ ರೂಪಿಸಿದೆ. ಪೊಲೀಸರು ಮತ್ತು ಸಾರ್ವಜನಿಕರ ನಡುವಣ ಸಂಪರ್ಕ ಸುಧಾರಣೆ, ಭ್ರಷ್ಟಾಚಾರ ನಿವಾರಣೆಗೆ ಪ್ರಜ್ಞಾವರ್ಧನೆ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ವಿಸ್ತರಿಸುವ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ಹೇಳಿದರು.

ಈ ವೇಳೆ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ಲ ಹತ್ತಿರ ಇರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಡಾ ಬಿ. ಆರ್.‌ ಅಂಬೇಡಕರ ಮತ್ತು ಕಿತ್ತೂರು ರಾಣಿ ಚನ್ನಮ್ಮನವರ ಪ್ರತಿಮೆಗೆ ಮಾಲರ್ಪಣೆ ಮಾಡಲಾಯಿತು. ನಂತರ ರಾಣಿ ಚನ್ನಮ್ಮ ಸರ್ಕಲ್ಲಿನಿಂದ ನೂತನವಾಗಿ ಉದ್ಘಾಟನೆಗೆ ಸಜ್ಜಾಗಿರುವ ಸಮಯ ನ್ಯೂಸ್‌ ಮತ್ತು ಸಾಮ್ರಾಟ ಟಿವಿ ಕಛೇರಿ ವರೆಗೆ ಬೈಕ್‌, ಅಟೋ ಮತ್ತು ಕಾರ್‌ ಶೋ ಜರುಗಿತು.

ಪೋಲೀಸ್ ಕಲ್ಯಾಣ ಅಭಿವೃದ್ಧಿ ಸಂಘದ ರಾಜ್ಯ ಸಂಚಾಲಕ ಎಮ್‌, ಎನ್‌ ಗಡಾದ ಸ್ವಾಗತಿಸಿದರು, ಎಸಿಎಫ್‌ ಸಂಘದ ಚನ್ನಮ್ಮನ ಕಿತ್ತೂರು ತಾಲೂಕಾಧ್ಯಕ್ಷ ಬಸವರಾಜ ಚಿನಗುಡಿ ವಂದಿಸಿದರು,

ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ʻʻಸಾಮ್ರಾಟ್ ಟಿವಿ ಯುವರತ್ನʻʻ ಪ್ರಶಸ್ತಿ ಪ್ರಧಾನ ಮಾಡಲಾಯಿತು.


ಈ ವೇಳೆ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಶಂಕರ ಹೊಳಿ, ಎಸ್‌ಸಿಎಫ್‌ ಸಂಘದ ಚನ್ನಮ್ಮನ ಕಿತ್ತೂರು ತಾಲೂಕಾ ಘಟಕದ ಪದಾಧಿಕಾರಿಗಳಾದ ಪುಂಡಲೀಕ ಸುಣಗಾರ, ಈರಣ್ಣ ದೊಡಮನಿ, ರಾಜೇಂದ್ರ ಹುಬ್ಬಳ್ಳಿ, ಚಂದ್ರಗೌಡ ಪಾಟೀಲ, ಬಸನಗೌಡ ಪಾಟೀಲ, ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಘದ ಮಹಿಳಾ ಘಟಕದ ಜಯಶ್ರೀ ಕಮ್ಮಾರ, ಶಮೀನಾ ನಧಾಪ, ದೀಪಾ ರೊಟ್ಟಿ, ಆರತಿ ಗವಳಿ, ರೇಣುಕಾ ಹೊಸುರ, ಸಾರಾಂಬಿ ಜತ್ತಿ, ಶೋಭಾ ಮಾಳಿ, ಭಾಳಪ್ಪ ಜೋಗಿ, ಕಲ್ಮೇಶ್ವರಸ್ವಾಮಿ ಹಿರೇಮಠ, ಎ. ಕೆ. ಅಂಜನಪ್ಪ, ಶ್ರೀನಿವಾಸ ಬಂಡಿವಡ್ಡರ, ಪೊಲೀಸ್ ಅಧಿಕಾರಿಗಳು, ವಿವಿಧ ಸಮಾಜದ ಗಣ್ಯರು, ಯುವ ಸಂಸ್ಥೆ, ಸಾಹಿತಿಗಳು, ಕಲಾವಿದರು ನಾನಾ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು, ಸಮಯ ಮತ್ತು ಸಾಮ್ರಾಟ ಟಿವಿಯ ಪತ್ರಕರ್ತರು ಮತ್ತು ಸಾರ್ವಜನಿಕರು.

LEAVE A REPLY

Please enter your comment!
Please enter your name here