ಚನ್ನಮ್ಮನ ಕಿತ್ತೂರು, ಅಕ್ಟೋಬರ್ 16: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುರುವಾರ ಪೇಟೆ ಕಿತ್ತೂರು ನಲ್ಲಿ ಇಂದು ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಎಸ್‌ಬಿಐ ಫೌಂಡೇಶನ್ ಇವರ ಸಹಯೋಗದಲ್ಲಿ ಕಿತ್ತೂರು ವಲಯದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು,ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಸಮನ್ವಯ ಶಿಕ್ಷಣ ಶಿಬಿರ ಒಂದು ದಿನದ ಕಾರ್ಯಗಾರ ಏರ್ಪಡಿಸಲಾಯಿತು.
ಸಭೆ- ಅಧ್ಯಕ್ಷತೆಯನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಉಳುವೇಶ್ ಶಿವಪ್ಪ ತೇಗು ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳು ಚನ್ನಮ್ಮ ಬಸಯ್ಯ ಹಿರೇಮಠ್ ಹಾಗೂ ಶಿವಕುಮಾರ್ ಹಲ್ಯಾಳ ಜಿಲ್ಲಾ ಸಮನ್ವಯ ಅಧಿಕಾರಿಗಳು ಹಾಗೂ ಕುಮಾರಿ ಪೂಜಾ ಈಟಿ. ಸತ್ಯಪ್ಪ ರಾಚಪ್ಪನವರ, ಅನಿಲ ಸಿಂದೋಳ್ಳಿ ಹಾಗೂ ಶ್ರೀ ಬಸವನಗೌಡ ಪಾಟೀಲ್ ಭಾಗವಹಿಸಿದ್ದರು ಶಿವಕುಮಾರ ಹಲ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ಧೇಯೋದ್ದೇಶಗಳ ಬಗ್ಗೆ ಹಾಗೂ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ಚನ್ನಮ್ಮ ಹಿರೇಮಠ ಶಿವಕುಮಾರ್ ಹಲ್ಯಾಳ ಮಾತನಾಡಿ ವಿಶೇಷ ಚೇತನ ಮಕ್ಕಳ ಮುಖ್ಯ ವಾಹಿನಿಗೆ ತರುವಲ್ಲಿ ಆಶಾ ಕಾರ್ಯಕರ್ತರು ಅಂಗನವಾಡಿ ಶಿಕ್ಷಕರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಶ್ರಮ ಬಹಳಷ್ಟು ಇದೆ ಎಂದು ಹೇಳಿದರು. ಕುಮಾರಿ ಪೂಜಾ ಇ ಟಿ ಯವರು ಮಾತನಾಡಿ ಅಂಗವೈಕಲ್ಲಿ ಉಂಟಾಗುವ ಕಾರಣಗಳು ಪರಿಹಾರ ರೂಪಗಳು ಹಾಗೂ ವಿಕಲಚೇತನ ವಿವಿಧ ಬಗೆಗಳ ಬಗ್ಗೆ ವಿವರವಾಗಿ ಮಾತನಾಡಿದರು
ಕೊನೆಯಲ್ಲಿ ಕಾರ್ಯಗಾರ ಅಧ್ಯಕ್ಷತೆಯನ್ನು ವಹಿಸಿದ ಶ್ರೀಮತಿ ಚನ್ನಮ್ಮ ಹಿರೇಮಠಮಾತನಾಡಿ ವಿಶೇಷ ಚೇತನ ಮಕ್ಕಳಿಗೆ ಪಾಲಕರಲ್ಲಿ ಜಾಗೃತಿಯನ್ನುಮೂಡಿಸಿ ಇವುಗಳ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು .
ಕಾರ್ಯಕ್ರಮದಲ್ಲಿ ಶ್ರೀ ಸತ್ಯಪ್ಪ ರಾಚಪ್ಪನವರ ಕಾರ್ಯಕ್ರಮ ನಿರೂಪಣೆ ವಹಿಸಿದರು ಶ್ರೀಮತಿ ತೇಜಸ್ವಿನಿ ಮಯೇಕರ ಯೋಜನಾ ಸಂಯೋಜಕರು ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಳಗಾವಿ ಹಾಗೂ ಕಿತ್ತೂರು ವಲಯದ ಆಶಾ ಕಾರ್ಯಕರ್ತರು ಅಂಗನವಾಡಿ ಶಿಕ್ಷಕರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಪಾಲ್ಗೊಂಡಿದ್ದರು