Home ವಿಶೇಷ ಶಾರ್ಪ್ ಶೂಟರ್ ಅಮಟೂರ ಬಾಳಪ್ಪನವರ 199ನೇಯ ಹುತಾತ್ಮ ದಿವಸ!

ಶಾರ್ಪ್ ಶೂಟರ್ ಅಮಟೂರ ಬಾಳಪ್ಪನವರ 199ನೇಯ ಹುತಾತ್ಮ ದಿವಸ!

0
ಶಾರ್ಪ್ ಶೂಟರ್ ಅಮಟೂರ ಬಾಳಪ್ಪನವರ 199ನೇಯ ಹುತಾತ್ಮ ದಿವಸ!

1824 ಅಕ್ಟೋಬರ್ ಅಕ್ಟೋಬರ್ 23 ರಂದು ರಾಣಿ ಚೆನ್ನಮ್ಮಾಜಿಯ ಬಲಗೈ ಬಂಟನಾದ ಅಮಟೂರ ಬಾಳಪ್ಪನವರು ಅಂದಿನ ಧಾರವಾಡ ಜಿಲ್ಲೆಯ ಕಲೆಕ್ಟರ್ ಮತ್ತು ಪೊಲಿಟಿಕಲ್ ಏಜೆಂಟ್ ಆಗಿರುವ ಜಾನ್ ಥ್ಯಾಕ್ರೆ ಎಂಬ INDIAN CIVIL SERVICE ವೃಂದದ ಅಧಿಕಾರಿಯನ್ನು ಹೊಡೆದು ಹಾಕಿದ್ದು ಜಗತ್ತಿನ ಇತಿಹಾಸದಲ್ಲಿ ಅದ್ವಿತೀಯ, ಭಾರತೀಯರ ಇತಿಹಾಸದ ಸ್ವಾಭಿಮಾನದ ಅಮೃತಗಳಿಗೆ.

ಕಾರಣ ಇಡೀ ಜಗತ್ತನ್ನೇ ಆಳಿದ ಬ್ರಿಟಿಷರು ಎಲ್ಲಿಯೂ ಸಹಿತ ತಮ್ಮ ICS (Indian civil service) ಹಂತದ ಅಧಿಕಾರಿಗಳನ್ನು ಕಳೆದುಕೊಳ್ಳಲಿಲ್ಲ.

Indian civil Service ವೃಂದದ ಅಧಿಕಾರಿಯನ್ನು ಹೊಡೆದು ಹಾಕಿರುವ ಜಗತ್ತಿನ ಮೊದಲಿಗ ಅಮಟೂರ ಬಾಳಪ್ಪನವರು,ಅದು ನಮ್ಮ ಹೆಮ್ಮೆಯ ಕಿತ್ತೂರು ನೆಲದಲ್ಲಿ ಆದರೆ ಇ ಇತಿಹಾಸದ ಸತ್ಯ ಜಗತ್ತಿಗೆ ಪಸರಿಲೇ ಇಲ್ಲಾ ಅನ್ನುವ ಕೊರಗು ಮನಸ್ಸಿನದು.

ಕಿತ್ತೂರು ನಾಡಿನ ಎಂಟೆದೆಯ ಬಂಟ ಶಾರ್ಪ ಶೂಟರ್ ಅಮಟೂರು ಬಾಳಪ್ಪನವರು ಇಟ್ಟ ಗುರಿ ಮಾತ್ರ ತಪ್ಪಲಿಲ್ಲ.ಕಾರಣ ಇಷ್ಟೇ ಗರ್ವದ ಗೂಳಿಯಂತೆ ವರ್ತಿಸುತ್ತಿದ್ದ ಜಾನ್ ಥ್ಯಾಕರೆಯ ಎದೆಯನ್ನು ಸೀಳಿರುವುದು ಅಮಟೂರು ಬಾಳಪ್ಪನವರ ಬಂದೂಕಿನ ನಳಿಕೆಯಿಂದ ಹೊರ ಬಿದ್ದ ಸಿಡಿಲಿನ ವೇಗದ ಗುಂಡುಗಳು ಥ್ಯಾಕರೆಯ ಹೃದಯವನ್ನು ಹರಿದು ಹಾಕಿತ್ತು.

ಜಗತ್ತಿನಲ್ಲಿ ನಮಗ್ಯಾರು ಸರಿಸಾಟಿ ಎಂಬಂತೆ ಮೆರೆಯುತ್ತಿದ್ದ ಕೆಂಪು ಮೋತಿಯ ಪಿರಂಗಿಗಳ ಸ್ವಾಭಿಮಾನ ನೆಲ ಹಿಡಿದಿತ್ತು.ವಿಕ್ಟೋರಿಯಾ ರಾಣಿಯ ಕಿರೀಟ ಭಾರತ ಮಾತೆಯ ಅಡಿಯಲ್ಲಿ ನರಳುತ್ತಿತ್ತು. ನಂತರ ಸುಮ್ಮನೆ ಕೊಡ್ರದ ಬ್ರಿಟಿಷ್ ಸರ್ಕಾರ ಕುತಂತ್ರದಿಂದ ಕಿತ್ತೂರಿನ ಎರಡನೆಯ ಯುದ್ದದಲ್ಲಿ ಕಿತ್ತೂರಿನ ಪರವಾಗಿ ಯಾರೂ ನಿಲ್ಲದಂತೆ ರಣತಂತ್ರವನ್ನು ರೂಪಿಸಿ 1824 ನಂಬರ್ 30 ರಿಂದ ಪ್ರಾರಂಭ ಮಾಡಿದ ಎರಡನೆಯ ಯುದ್ಧ 1824 ಡಿಸೆಂಬರ ಐದನೇ ತಾರೀಖಿಗೆ ಮುಕ್ತಾಯಗೊಂಡಿತ್ತು.

ಡಿಸೆಂಬರ್ 4ರಂದು ಕಿತ್ತೂರು ಕೋಟೆಯ watch tower ಎಂದೇ ಪ್ರಸಿದ್ದಯಾದ ಗಡಾದ ಮರಡಿಯಲ್ಲಿ ಬ್ರೀಟಿಷ ಅಧಿಕಾರಿ ಮುಂಬೈ ಪ್ರೇಸಿಡೆನ್ಸಿಯ ಕಮೀಷನರ್ ಚಾಪ್ಲೀನ್ ನ ಬಂದೂಕಿನ ನಳಿಕೆಯಿಂದ ಹೊರ ಬಿದ್ದ ಗುಂಡುಗಳು ದೇಶಭಕ್ತ ಶಾರ್ಪ ಶೂಟರ್ ಅಮಟೂರು ಬಾಳಪ್ಪನ ಪ್ರಾಣ ಪಕ್ಷಿಯನ್ನು ಹಾರಿಸಿಕೊಂಡು ಹೋಗಿತ್ತು.ಇದೇ ಸಂದರ್ಭದಲ್ಲಿ ಕಿತ್ತೂರು ಸಂಸ್ಥಾನದ ಸೇನಾ ದಂಡನಾಯಕ ಸರ್ದಾರ್ ಗುರುಸಿದ್ದಪ್ಪ ,ಸಂಗೊಳ್ಳಿ ರಾಯಣ್ಣ, ಬಿಚ್ಚುಗತ್ತಿ ಚೆನ್ನಬಸಪ್ಪ, ಮುಂತಾದವರೆಲ್ಲನ್ನ ಬ್ರಿಟಿಷರು 1824 ಡಿಸೆಂಬರ್ 4ನೇ ತಾರೀಖಿ ನಂದು ಸೆರೆ ಹಿಡಿದು ಧಾರವಾಡದ ಜೈಲಿಗೆ ಸಾಗಿಸಿದರು.

ಅವರಾದಿ ವೀರಪ್ಪ ಬ್ರಿಟಿಷರ ಕೈಗೆ ಸಿಗಲಾರದೇ ಕಿತ್ತೂರಿ ನಿಂದ ರಕ್ಷಣೆಗೋಸ್ಕರ ಹೊರನಡೆದರು .ಇನ್ನು ಸರೆ ಹಿಡಿದ ಸಂಗೊಳ್ಳಿ ರಾಯಣ್ಣ ಅಮಟೂರು ಬಾಳಪ್ಪ ಮುಂತಾದವರೆಲ್ಲರನ್ನು ಸನ್ನಡತೆಯ ಆಧಾರದ ಮೇಲೆ 1825 ಜನವರಿ 23ರಂದು ಧಾರವಾಡದ ಜೈಲಿನಿಂದ ಬಿಡುಗಡೆ ಮಾಡಿದರು .ಆದರೆ ಅಂದಿನ ಕಿತ್ತೂರು ಸಂಸ್ಥಾನದ ಸೇನಾ ದಂಡನಾಯಕ ಸರ್ದಾರ್ ಗುರುಸಿದ್ದಪ್ಪನವರನ್ನು ಬಿಡುಗಡೆ ಮಾಡಲಾರದೆ ಆತನ ಕುರಿತು ಬ್ರಿಟಿಷರು ತಮ್ಮ ಪತ್ರಗಳಲ್ಲಿ ಈ ರೀತಿಯಾಗಿರುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ .ಸರದಾರ ಗುರುಸಿದ್ದಪ್ಪನನ್ನು ಬಿಡುಗಡೆ ಮಾಡಿದರೆ ಕಂಪನಿ ಸರ್ಕಾರಕ್ಕೆ ಆತಂಕ ಇದೆ ಆತ ಮಹಾನ್ ಶೂರ ಸಂಘಟನಾ ಚತುರ, ಸಂಸ್ಥಾನದ ಜನರ ಮೇಲೆ ಭಾವನಾತ್ಮಕವಾದ ಹಿಡಿತ ಆತನಿಗೆ ಇರುವ ಕಾರಣ ಆತನನ್ನು ಬಿಡುಗಡೆ ಮಾಡುವುದು ಬೇಡ ಎಂದು ಪತ್ರ ವ್ಯವಹಾರಗಳಲ್ಲಿ ಉಲ್ಲೇಖಿಸಿದ್ದಾರೆ.

ಸರದಾರ್ ಗುರು ಸಿದ್ದಪ್ಪನನ್ನು ಇತರರ ಜೊತೆಗೆ 1825 ಜನೇವರಿ 23 ರಂದು ಬಿಡುಗಡೆ ಮಾಡಲಾರದೆ ಬೆಳಗಾವಿಯಲ್ಲಿ 1827 ರಲ್ಲಿ ಗಲ್ಲುಶಿಕ್ಷೆ ನೀಡಿ ಆತನ ಶರೀರವನ್ನು ತುಂಡು ತುಂಡಾಗಿ ಕತ್ತರಿಸಿ ಹುಕ್ಕೇರಿ ಹತ್ತಿರವಿರುವ ಹಂದಿಗೂಡ ನಲ್ಲಿ ಚೆಲ್ಲಿದರು ದೈತ್ಯ ಕಂಪನಿ ಸರ್ಕಾರದ ಜಂಗಾ ಬಲವನ್ನೇ ಉಡುಗಿಸಿದ ಸಣ್ಣ ಕಿತ್ತೂರ ಸಂಸ್ಥಾನದ sharp shooter ಅಮಟೂರು ಬಾಳಪ್ಪನವರು ಹುತಾತ್ಮವಾದದ್ದು 1824 ಡಿಸೆಂಬರ್ 4 ರಂದು. ಇದಕ್ಕೂ ಮುಂಚೆ ಅಮಟೂರ ಬಾಳಪ್ಪನವರು ಕಿತ್ತೂರು ದೊರೆ ಮಲ್ಲಸರ್ಜ ದೇಸಾಯಿಯ ನಂತರ ರಾಣಿ ಚನ್ನಮ್ಮಾಜೀಯ ಅಂಗ ರಕ್ಷಕನಾಗಿ ಕಿತ್ತೂರು ಸಂಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಇಡೀ ಜಗತ್ತಿಗೆ ಇವತ್ತು ಭಗತ್ ಸಿಂಗ್ ಚಂದ್ರಶೇಖರ್ ಆಜಾದ್ ರಾಜ್ ಗುರು, ಸುಖದೇವ್ ಎಂಬ ಮಹಾನ್ ಕ್ರಾಂತಿಕಾರಿಗಳ ಜೀವನ ಚರಿತ್ರೆ ಪರಿಚಯವಾಗಿದೆ,ಅವರ ಕುರಿತು ಚಲನಚಿತ್ರಗಳು ಬಂದಿವೆ .ಇವರೆಲ್ಲರಿಗಿಂತ 106 ವರ್ಷಗಳ ಮುಂಚೆ ಈ ದೇಶದ ಸ್ವಾತಂತ್ರ್ಯಕ್ಕೋಸ್ಕರ ತನ್ನ ನೆತ್ತರನ್ನು ಈ ನೆಲಕ್ಕೆ ಅರ್ಪಿಸಿದ ಅರ್ಪಿಸಿಕೊಂಡ ಅಮಟೂರು ಬಾಳಪ್ಪನವರು ಹುತಾತ್ಮನಾದ ದಿನ ಡಿಸೆಂಬರ‌ 4 ಕನಿಷ್ಠ ಸಮಸ್ತ ಕನ್ನಡಿಗರಿಗಾದರೂ ತಿಳಿಯುವಂತಹ ಯೋಜನೆ,ಯೋಚನೆ ಮೂಡಿ ಬರಲಿ ಎಂಬುವುದು ಈ ಬರವಣಿಗೆಯ ಆಶಯ.

ಡಿಸೆಂಬರ್ 4 ,2022 ಕ್ಕೆ ಅಮಟೂರು ಬಾಳಪ್ಪನವರು ಹುತಾತ್ಮರಾಗಿ ಒಂದು 199 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಅಮಟೂರ ಬಾಳಪ್ಪ ನವರ ಹುತಾತ್ಮರಾದ ದಿನದಂದು ಸರಕಾರದ ವತಿಯಿಂದ ಕಳೆದ ವರ್ಷಗಳಿಂದ ಗೌರವ ನಮನ ಸಲ್ಲಿಸಲು ನಿರ್ಧರಿಸಿರುವ ನಡೆ ಮೆಚ್ಚುವಂತದ್ದು.

ಒಟ್ಟಿನಲ್ಲಿ ಕಿತ್ತೂರು ಇತಿಹಾಸ ಚಿರಸ್ಥಾಯಿಯಾಗಿ ಉಳಿಯುವಲ್ಲಿ ಅಮಟೂರು ಬಾಳಪ್ಪನವರ ಪಾತ್ರ ಪ್ರಮುಖವಾಗಿದೆ..ದೇಶಭಕ್ತ ಅಮಟೂರ ಬಾಳಪ್ಪನವರು ಹುತಾತ್ಮರಾದ 199ನೇಯ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಯ ಪರವಾಗಿ ಗೌರವ ನಮನಗಳು.

LEAVE A REPLY

Please enter your comment!
Please enter your name here