ಬೆಂಗಳೂರು: ಸೂರ್ಯಚಂದ್ರ ಇರೋದು ಎಷ್ಟು ಸತ್ಯವೋ, ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯೋದು ಕೂಡಾ ಅಷ್ಟೇ ಸತ್ಯ. ಫೆಬ್ರುವರಿ 10ಕ್ಕೆ ಸಿಹಿಸುದ್ದಿ ಸಿಗಲಿದೆ. ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮರು ಆಯ್ಕೆ ಆಗ್ತಾರೆ. ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ಬಣ ರಾಜಕೀಯಕ್ಕೆ ಅವಕಾಶ ಇಲ್ಲ. ಯಾರೋ ನಾಲ್ಕು ಜನ ಸೇರಿದ್ರೆ ಬಣ ಹೇಗಾಗುತ್ತೆ. ಭಿನ್ನಮತಿಯರದ್ದು ಗುಂಪಷ್ಟೇ, ಅದು ಬಣ ಅಲ್ಲ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಿರುದ್ಧ ತೊಡೆ ತಟ್ಟಿರುವ ಕೆಲ ಬಿಜೆಪಿ ರೆಬೆಲ್ಸ್ (BJP Rebels) ನಾಯಕರು ದೆಹಲಿಗೆ ತೆರಳಿದ್ದಾರೆ.
ರಾಜ್ಯಾಧ್ಯಕ್ಷರ ಸ್ಥಾನ ಬದಲಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿರುವ ಈ ರೆಬೆಲ್ಸ್ ನಾಯಕರು ಬಿಜೆಪಿ ಹೈಕಮಾಂಡ್ಗೆ ತಮ್ಮ ಮನವಿ ಸಲ್ಲಿಸಲು ಮುಂದಾಗಿದ್ದರು. ಬಿಜೆಪಿಯ ಒಳಜಗಳ ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ.
ಬಿಜೆಪಿ ಬಂಡಾಯ ನಾಯಕರು ಒಂದು ಕಡೆಯಾದ್ರ, ಬಿವೈ ವಿಜಯೇಂದ್ರ ಕಡೆಯವರು ಮತ್ತೊಂದು ಗ್ರೂಪ್ ಮಾಡಿಕೊಂಡಿದ್ದಾರೆ. ಅತ್ತ ಎರಡೂ ಕಡೆಯಿಂದಲೂ ಏಟಿಗೆ ಎದುರೇಟು ಎಂಬಂತೆ ಮಾತಿಗೆ ಮಾತು ಆಡುತ್ತಲೇ ಇದ್ದಾರೆ.