Home ಸ್ಥಳೀಯ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ: ಕಿತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿ ಈರಣ್ಣ ಕರಡಿ ಆಯ್ಕೆ!

ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ: ಕಿತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿ ಈರಣ್ಣ ಕರಡಿ ಆಯ್ಕೆ!

0
ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ:  ಕಿತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿ ಈರಣ್ಣ ಕರಡಿ ಆಯ್ಕೆ!

ಚನ್ನಮ್ಮನ ಕಿತ್ತೂರ, ನವೆಂಬರ್ 18 : ಇಲ್ಲಿಯ ಪ್ರಾಥಮಿಕ ಶಾಲಾಶಿಕ್ಷಕರ ಸಹಕಾರ ಸಂಘದ ಕಚೇರಿಕಟ್ಟಡದಲ್ಲಿ ಕರ್ನಾಟಕ ರಾಜ್ಯ ಸರಕಾರಿನೌಕರರ ಸಂಘ ತಾಲೂಕು ಘಟಕದ ಅಧ್ಯಕ್ಷ ಖಜಾಂಚಿ ಮತ್ತು ರಾಜ್ಯ ಪರಿಷತ್ತ ಸ್ಥಾನಗಳಿಗೆ ಶನಿವಾರ ಚುನಾವಣೆ ಜರುಗಿತು.

ಚನ್ನಮ್ಮನ ಕಿತ್ತೂರ ತಾಲೂಕ ಘಟಕದ ಚುನಾವಣೆಯಲ್ಲಿ 18 ಇಲಾಖೆಯಿಂದ 21 ಜನ ಅವಿರೋಧ ಹಾಗೂ ಉಳಿದ 2 ಇಲಾಖೆಯಿಂದ 7ಜನ ಚುನಾವಣೆ ಮೂಲಕ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

ಶನಿವಾರ ಅಧ್ಯಕ್ಷ ಖಜಾಂಚಿ ಮತ್ತು ರಾಜ್ಯ ಪರಿಷತ್ತ ಸ್ಥಾನಗಳಿಗೆ ನಡೆದ ಚುನಾವಣೆಭಾರಿ ತುರುಸಿನಿಂದ ಕೂಡಿತ್ತು. ಅಧ್ಯಕ್ಷ ಸ್ಥಾನಕ್ಕಾಗಿತೀವ್ರ ಪೈಪೋಟಿ ನಡೆದು ಕಂದಾಯ ಇಲಾಖೆಯ ಈರಣ್ಣಾರಾಯಪ್ಪ ಕರಡಿ ಹಾಗೂ ಶಿಕ್ಷಣ ಇಲಾಖೆಯಆದಿನಾಥ ವಣ್ಣೂರ ತಲಾ 9 ಮತ ಪಡೆದು ಸಮಬಲ ಸಾಧಿಸಿದರು.

ಚುನಾವಣಾಧಿಕಾರಿ ಹಾಗೂ ಎಲ್ಲರಒಪ್ಪಿಗೆ ಮೇರೆಗೆ ಅಂತಿಮವಾಗಿ ಚೀಟಿ ಎತ್ತಲಾಯಿತು. ಚೀಟಿ ಎತ್ತಿದಾಗ ಕಂದಾಯ ಇಲಾಖೆಯಈರಣ್ಣಾ ರಾಯಪ್ಪ ಕರಡಿ ಇವರ ಹೆಸರು ಬಂದಿದ್ದರಿಂದ ಆಯ್ಕೆಯಾದರು. ಅಧ್ಯಕ್ಷರಾಗಿರಾಜ್ಯ ಪರಿಷತ್ ಸ್ಥಾನಕ್ಕೆ ಶಿಕ್ಷಣಇಲಾಖೆಯ ಪಂಡಿತ ಗಂಗಪ್ಪ ಪಡೆಣ್ಣವರ14 ಮತಗಳನ್ನು ಪಡೆದು ಆಯ್ಕೆಯಾದರು.

ಖಜಾಂಚಿಸ್ಥಾನಕ್ಕೆ ಆರೋಗ್ಯ ಇಲಾಖೆಯ ಶಿವಪ್ಪ ನಿಂಗಪ್ಪಬೆಣಚಮರಡಿ 15 ಮತ ಪಡೆದು ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಡಿ.ಆರ್. ಪಾಟೀಲ ತಿಳಿಸಿದರು.

ಉಪ ಚುನಾವಣಾಧಿಕಾರಿ ಸಿ.ಎಮ್. ಪಾಗಾದ,ಕಂದಾಯ, ಶಿಕ್ಷಣ, ಆರಕ್ಷಕ, ಅಬಕಾರಿ ಸೇರಿದಂತೆಇತರೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here