ಹುಬ್ಬಳ್ಳಿ, ಫೆಬ್ರವರಿ 02: ಕರ್ನಾಟಕದಲ್ಲಿ ಬಡವರಿಗೆ, ಶ್ರಮಿಕರಿಗೆ ಮಿತಿ ಮೀರಿ ಸಾಲ ನೀಡಿ, ಸಾಲಕ್ಕಾಗಿ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ತರಲು ಮುಂದಾಗಿದೆ. ಆದರೆ ಇನ್ನೂ ಮಂಡನೆ ಆಗಿಲ್ಲ. ಈ ಬಗ್ಗೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿ ತಡೆಗೆ ಸರ್ಕಾರ ಸಿದ್ಧವಾಗಿದೆ ಎಂದಿದ್ದಾರೆ.
ಭಾನುವಾರ ನಗರದಲ್ಲಿ ಮಾತನಾಡಿದ ಅವರು, ಮೈಕ್ರೋ ಪೈನಾನ್ಸ್ ಕಂಪನಿ, ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದೆ. ಇದರಿಂದ ಸಾವು, ನೋವು ಉಂಟಾಗಿದೆ. ಈಹಿನ್ನೆಲೆಯಲ್ಲಿ ಈ ಮೈಕ್ರೋ ಪೈನಾನ್ಸ್ ಹಾವಳಿ ತಡೆಗೆ ಈಗಾಗಲೇ ಸುಗ್ರೀವಾಜ್ಞೆ ಮಸೂದೆಯನ್ನ ತಯಾರು ಮಾಡಿ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡಲಾಗಿದೆ.
ಬಡವರನ್ನ, ಜನಸಾಮಾನ್ಯರನ್ನು ರಕ್ಷಣೆ ಮಾಡಬೇಕಾಗಿದೆ. ಬಡವರನ್ನ ಮನಬಂದಂತೆ ಥಳಿಸಿ ಸಾಲ ವಸೂಲಿ ಮಾಡಲಾಗುತ್ತಿದೆ. ಆದ್ದರಿಂದ ಮೈಕ್ರೋಪೈನಾನ್ಸ್, ಬಡ್ಡಿ ದಂಧೆಕೋರರಿಗೆ ಲಗಾಮು ಹಾಕಬೇಕಾಗಿದೆ. ಈ ಸಂಬಂಧ ಸುಗ್ರಿವಾಜ್ಞೆ ತಯಾರು ಮಾಡಲಾಗಿದೆ. ಓಂಬಡ್ಸ್ ಮನ್ ನೇಮಕ ಮಾಡಲಾಗುತ್ತಿದೆ. ಇನ್ನು ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರಿ ನೀಡಲಾವುದು. ಜನರ ಭಾವನೆ ಹಾಗೂ ಬದಕುಕಿನ ವಿರುದ್ಧ ವಸೂಲಿ ಮಾಡುವ ಪ್ರಕ್ರಿಯೆ ನಾವು ಒಪ್ಪಲ್ಲ ಎಂದು ಅವರು ತಿಳಿಸಿದರು.