
ಬೈಲಹೊಂಗಲ, ನವೆಂಬರ್ 30: ಮುರಗೋಡ ಗ್ರಾಮದ ಹೊರ ವಲಯದಲ್ಲಿ ಶನಿವಾರ 17ವರ್ಷದ ಹುಡುಗನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ಹತ್ಯೆಗೀಡಾದ ಹುಡುಗನನ್ನು ಸೋಹೇಲ್ ಅಹ್ಮದ್ ಕಿತ್ತೂರು ಎಂದು ಗುರುತಿಸಲಾಗಿದೆ. ಚಾಕುವಿನಿಂದ ಮನಸ್ಸಿಗೆ ಬಂದಂತೆ ಸೋಹೇಲ್ ದೇಹದ ಮೇಲೆ ಎಲ್ಲೆಂದರಲ್ಲಿ ಚುಚ್ಚಿ ಐವರು ದುಷ್ಕರ್ಮಿಗಳು ಕೊಲೆಗೈದಿದ್ದಾರೆ.
ಸ್ಥಳಕ್ಕೆ ಮುರಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಹಳೆ ವೈಷಮ್ಯ ಈ ಭೀಭತ್ಸ ಕೊಲೆಗೆ ಕಾರಣ ಅಂತ ಹೇಳಲಾಗುತ್ತಿದೆ ಆದರೆ ತನಿಖೆಯಿಂದಷ್ಟೇ ನಿರ್ದಿಷ್ಟ ಕಾರಣ ಗೊತ್ತಾಗಬೇಕಿದೆ.