spot_img
Thursday, April 17, 2025
spot_imgspot_imgspot_imgspot_img
spot_img

Top 5 This Week

spot_img

Related Posts

ಮರಾಠಿ ಭಿತ್ತಿಪತ್ರ, ನಾಮಫಲಕಗಳನ್ನು ಕಿತ್ತೆಸೆದ ಕಿತ್ತೂರು ಕರ್ನಾಟಕ ಸೇನೆ! ಚಿಕ್ಕೋಡಿಯಲ್ಲಿ ಕನ್ನಡಪರ ಘೋಷಣೆ!

ಚಿಕ್ಕೋಡಿ, ಫೆಬ್ರವರಿ 25 : ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಡಿ ಗ್ರಾಮ ಮಾಣಕಾಪೂರ ಗ್ರಾಮ ಪಂಚಾಯಿತಿಯಲ್ಲಿ ಕನ್ನಡ ಕಡೆಗಣಿಸಿ ಮರಾಠಿಯಲ್ಲಿ ಮಾತ್ರ ಅಳವಡಿಸಿದ ನಾಮಫಲಕಗಳನ್ನು ತೆರವುಗೊಳಿಸಿದ ಕಿತ್ತೂರು ಕರ್ನಾಟಕ ಸೇನೆ.

ಮಾಣಕಾಪೂರ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಮತ್ತು ಆಡಳಿತ ಮಂಡಳಿ ಪಂಚಾಯಿತಿಯ ಪಿಡಿಓ, ಕಾರ್ಯದರ್ಶಿ, ಅಧ್ಯಕ್ಷ -ಉಪಾಧ್ಯಕ್ಷರಗಳ ಕೊಠಡಿಗಳಿಗೆ ಅಳವಡಿಸಿದ ನಾಮಫಲಕಳೆಲ್ಲವೂ ಮರಾಠಿಯಲ್ಲಿ ಮಾತ್ರ ಅಳವಡಿಸಿದಕ್ಕೆ ಆಕ್ರೋಶ ವ್ಯಕ್ತಪಡಿಸಿದರು .

ಕಿತ್ತೂರು ಕರ್ನಾಟಕ ಸೇನೆಯ ಪದಾಧಿಕಾರಿಗಳು ನೇರವಾಗಿ ಪಂಚಾಯತಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಭಟಿಸಿದ ಕಿತ್ತೂರು ಕರ್ನಾಟಕ ಸೇನೆಯ ಪದಾಧಿಕಾರಿಗಳು ಮರಾಠಿಯಲ್ಲಿ ಅಳವಡಿಸಿದ ನಾಮಫಲಕಗಳನ್ನು ತೆರವುಗೊಳಿಸುವವರೆಗೂ ಪ್ರತಿಭಟನೆ ಮುಂದುವರೆಸಿ ಮರಾಠಿಯಲ್ಲಿರುವ ನಾಮಫಲಕಗಳನ್ನು ತೆರವುಗೊಳಿಸಿದ ನಂತರ ಪ್ರತಿಭಟನೆ ಹಿಂಪಡೆದರು.

ಈ ಸಂದರ್ಭದಲ್ಲಿ ಕಿತ್ತೂರು ಕರ್ನಾಟಕ ಸೇನೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷ ನಾಗೇಶ್ ಮಾಳಿ, ಜಿಲ್ಲಾ ಸಂಚಾಲಕ ಸಾಹುಕಾರ ಬಸ್ತವಾಡೆ, ಕಾಗವಾಡ ತಾಲೂಕಾ ಅಧ್ಯಕ್ಷ ರವಿ ಪಾಟೀಲ, ಚಿಕ್ಕೋಡಿ ತಾಲೂಕಿನ ಉಪಾಧ್ಯಕ್ಷ ರಾಮಾ ಹಂಡೆ ಮತ್ತು ಸೂರಜ್ ಕೋರೆ ಇತರರು ಭಾಗವಹಿಸಿದ್ದರು.

कोई जवाब दें

कृपया अपनी टिप्पणी दर्ज करें!
कृपया अपना नाम यहाँ दर्ज करें

Popular Articles