
ವಿಜಯಪುರ, ಡಿಸೆಂಬರ್ 07: ತಾಳಿಕೋಟೆ ಬಳಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ವಿಜಯಪುರದ ಒಂದೇ ಕುಟುಂಬದ ಐವರು ದುರ್ಮರಣಕ್ಕೆ ಈಡಾದ ದುರಂತ ಘಟನೆ ನನ್ನ ಮನಕಲಕಿದೆ ಎಂದು ಸಚಿವ ಎಮ್. ಬಿ ಪಾಟೀಲ್ ಹೇಳಿದ್ದಾರೆ.
ಈ ಅಪಘಾತದಲ್ಲಿ ಮಡಿದವರ ಬಗೆಗೆ ತೀವ್ರ ಕಂಬನಿ ಮಿಡಿಯುತ್ತೇನೆ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ. ರಸ್ತೆಗಳಲ್ಲಿ ಸಂಚರಿಸುವಾಗ ಓವರ್ ಟೇಕ್ ನಂತಹ ದುಸ್ಸಾಹಸಗಳಿಗೆ ಯಾರೂ ಪ್ರಯತ್ನಿಸದಿರಿ ಎಂದು ಕೇಳಿಕೊಂಡಿದ್ದಾರೆ.
ವೇಗಕ್ಕಿಂತಲೂ ಸುರಕ್ಷತೆ ಅತ್ಯಂತ ಮುಖ್ಯ, ಜಾಗರೂಕರಾಗಿ ವಾಹನ ಚಲಿಸಿ. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಎಲ್ಲಿಯೂ ಸಂಭವಿಸದಿರಲಿ ಎಂದು ಹೇಳಿದ್ದಾರೆ.