
ಬೈಲಹೊಂಗಲ, ಅಕ್ಟೊಬರ್ 21: ಇವತ್ತು ಬೈಲಹೊಂಗಲ ಬಂದ್ ಗಾಗಿ ಕರೆ ನೀಡಿದ್ದ ವೀರರಾಣಿ ಕಿತ್ತೂರು ಚನ್ನಮ್ಮನ ಸ್ಮರಣೋತ್ಸವ ಸಮಿತಿ ಬಂದ್ ನಿರ್ಧಾರದಿಂದ ಹಿಂದೆ ಸರಿದಿದೆ.
ಬೈಲಹೊಂಗಲ ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಚನ್ನಮ್ಮನ 200ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಬೇಕು. ಫೆಬ್ರವರಿ ಎರಡರಂದು ಸರಕಾರದಿಂದ ಚನ್ನಮನ ಸ್ಮರಣೋತ್ಸವ ನಡೆಸಬೇಕು ಎಂದು ಸಮಿತಿ ಆಗ್ರಹಿಸಿ ಬಂದ್ ಗೆ ಮುಂದಾಗಿತ್ತು.
ಬೈಲಹೊಂಗಲ ಎಸಿ ಕಾರ್ಯಾಲಯದಲ್ಲಿ ಭಾನುವಾರ ನಡೆದ ತುರ್ತು ಸಭೆಯಲ್ಲಿ ಬಂದ್ ಕರೆಯನ್ನು ವಾಪಸ್ ಪಡೆಯಲಾಗಿದೆ. ಶಾಸಕರು, ಅಧಿಕಾರಿಗಳ ಭರವಸೆ ಮೇರೆಗೆ ಬೈಲಹೊಂಗಲ ಬಂದ್ ಕೆರೆ ವಾಪಸ್ ಪಡೆಯಲಾಗಿದೆ.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಹೋರಾಟಗಾರರ ಬೇಡಿಕೆಯಂತೆ ರಾಜ್ಯ ಸರಕಾರದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ತಿಳಿಸಿದ್ದಾರೆ.