Home ಕೃಷಿ ಬೆಳಗಾವಿ ಜಿಲ್ಲೆಯ ಕೃಷಿ!

ಬೆಳಗಾವಿ ಜಿಲ್ಲೆಯ ಕೃಷಿ!

0
ಬೆಳಗಾವಿ ಜಿಲ್ಲೆಯ ಕೃಷಿ!

ಬೆಳಗಾವಿ ಜಿಲ್ಲೆ ಒಂದು ಕೃಷಿಪ್ರಧಾನ ಪ್ರದೇಶವಾಗಿದ್ದು, ಅನಾದಿಕಾಲದಿಂದಲೂ ಇಲ್ಲಿ ಉತ್ಪತ್ತಿಯಾಗುವ ಬೆಳೆಗಳು ತನ್ನದೇ ಆದ ಖ್ಯಾತಿಯನ್ನು ಹೊಂದಿವೆ.

ಬೆಳಗಾವಿಯ ಮೆಣಸಿನಕಾಯಿ, ಬದನೆ, ಸವತೆ, ಮತ್ತು ಹತ್ತಿ ಮುಂತಾದ ಬೆಳೆಗಳು, ನಾಡಿನ ಜನರ ಆಹಾರದ ಅವಿಭಾಜ್ಯ ಭಾಗವಾಗಿದೆ. ಜಿಲ್ಲೆಯ ಜಕನಾಯಕನಕೊಪ್ಪದ ಮೆಣಸಿನಕಾಯಿ ಮತ್ತು ಕಾದ್ರೋಳ್ಳಿಯ ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳು ದೇಶಾದ್ಯಂತ ಪ್ರಸಿದ್ಧವಾಗಿವೆ.

2023ರಲ್ಲಿ ಮುಂಗಾರು ಬೆಳೆಗಳಾಗಿ 710532 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, 677760 ಹೆಕ್ಟೇರಿನಲ್ಲಿ ಬಿತ್ತನೆ ಯಶಸ್ವಿಯಾಗಿ ಪೂರೈಸಲಾಗಿದೆ. ಇದೇ ರೀತಿ, ಹಿಂಗಾರು ಹಂಗಾಮಿನಲ್ಲಿ 366561 ಹೆಕ್ಟೇರಿನಲ್ಲಿ ಬಿತ್ತನೆ ಗುರಿ ಹೊಂದಿ 338477 ಹೆಕ್ಟೇರಿನಲ್ಲಿ ಬಿತ್ತನೆ ಮಾಡಿದ್ದಾರೆ.

ಕಪ್ಪು ನೆಲದ ಶಕ್ತಿ: ಜೋಳಹಿಂಗಾರಿಯಲ್ಲಿ ಪ್ರಮುಖವಾಗಿ ಬೆಳೆಯುವ ಜೋಳ ಇಲ್ಲಿಯ ಜನರ ಮುಖ್ಯ ಆಹಾರ. ಜೋಳದ ರೊಟ್ಟಿ, ಹಿಟ್ಟಿನಿಂದ ತಯಾರಿಸಲಾದ ವಿವಿಧ ಆಹಾರಗಳು ದೈನಂದಿನ ಉಪಯೋಗದಲ್ಲಿವೆ. ಇಲ್ಲಿ ಬೆಳೆದ ದೇಸಿ ಜೋಳದ ತಳಿಗಳು ಅತ್ಯಂತ ಪ್ರಸಿದ್ಧವಾಗಿವೆ.

ಸಿರಿಧಾನ್ಯಗಳ ಆವರಣ: ಬೆಳಗಾವಿಯಲ್ಲಿ ಸಿರಿಧಾನ್ಯಗಳಾದ ಸಜ್ಜೆ, ನವಣೆ, ಬರಗು ಮುಂತಾದವುಗಳು ಬರನಿರೋಧಕ ಗುಣ ಹೊಂದಿದ್ದು, ಈ ಭಾಗದ ರೈತರಿಗೆ ಸಹಾಯಕವೆನಿಸಿವೆ. ಗ್ರಾಮೀಣ ಭಾಗದ ರೈತರು, ಸಿರಿಧಾನ್ಯ ಬೆಳೆಯ ಮೂಲಕ ಆರೋಗ್ಯಕರ ಜೀವನಕ್ಕೆ ಪೂರಕವಾದ ಆಹಾರ ಒದಗಿಸುತ್ತಿದ್ದಾರೆ.

ತೋಟಗಾರಿಕೆ: ಬೆಳಗಾವಿಯ ತೋಟಗಾರಿಕೆಯಲ್ಲಿ ದ್ರಾಕ್ಷಿ ಮತ್ತು ತರಕಾರಿ ಬೆಳೆಯು ಪ್ರಮುಖವಾಗಿದೆ. ಘಟಪ್ರಭಾ ಮತ್ತು ಇತರ ಭಾಗಗಳಿಂದ ತೆಂಗಿನಕಾಯಿ, ಎಲೆಕೋಸು, ಹೂಕೋಸು, ಟೊಮ್ಯಾಟೊ ಮುಂತಾದವುಗಳನ್ನು ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ರಫ್ತು ಮಾಡಲಾಗುತ್ತದೆ. ಉಪಕಸಬು ಮತ್ತು ಪಶುಸಂಗೋಪನೆಹೈನುಗಾರಿಕೆ, ಕೋಳಿಸಾಕಾಣಿಕೆ, ಮತ್ತು ಮೀನುಗಾರಿಕೆ ಸಹ ಇದರಲ್ಲಿ ಪ್ರಮುಖವಾದ ಉಪಕಸಬುಗಳಾಗಿವೆ. ಈ ಕ್ಷೇತ್ರಗಳಲ್ಲಿ ಗ್ರಾಮೀಣ ಮಹಿಳೆಯರು ಭಾಗವಹಿಸಿ ತಮ್ಮ ಆದಾಯವನ್ನು ವೃದ್ಧಿಸಿಕೊಂಡಿದ್ದಾರೆ.

ನೀರಾವರಿ: ಬೆಳಗಾವಿಯು ನೀರಿನ ಮೂಲಗಳಾದ ನದಿಗಳಿಂದ ನೀರಾವರಿಯನ್ನು ಪಡೆಯುತ್ತಿದೆ. ನದಿ ತೀರದ ಪ್ರದೇಶಗಳಲ್ಲಿ ಕಬ್ಬು ಮತ್ತು ತರಕಾರಿಗಳನ್ನು ಬೆಳೆದು, ಸಕ್ಕರೆ ಕಾರ್ಖಾನೆಗಳಿಗೆ ನೀಡಲಾಗುತ್ತದೆ. ಇತ್ತೀಚಿಗೆ, ಸಾವಯವ ಬೆಳೆಗಳು ಬೆಳಗಾವಿ ಜಿಲ್ಲೆಯ ಕೃಷಿಗೆ ಹೊಸ ತಳಿ ಹಾಗೂ ಮೌಲ್ಯವರ್ಧನೆ ತರುತ್ತಿವೆ.

ಚಿತ್ರ ಲೇಖನ: ವಿನೋದ ರಾ. ಪಾಟೀಲ, ಚಿಕ್ಕಬಾಗೇವಾಡಿ

LEAVE A REPLY

Please enter your comment!
Please enter your name here